fbpx
ಸಮಾಚಾರ

ಕೆಟ್ಟ ಭಾಷೆಯಲ್ಲಿ ಬಿಗ್ ಬಾಸ್‌ ನಿಂದಿಸಿದ ಅರವಿಂದ್-ದಿವ್ಯಾ ಫ್ಯಾನ್ಸ್‌ಗೆ ಉತ್ತರ ಕೊಟ್ಟ ಗುಂಡ್ಕಲ್

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್​ ಸೋತಿರುವುದು ಅವರ ಫ್ಯಾನ್ಸ್​ಗೆ ಅಸಮಾಧಾನ ತಂದಿದೆ. ಹಾಗಾಗಿ ಅವರು ಬಿಗ್​ ಬಾಸ್​ ಆಯೋಜಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಕುರಿತು ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಇದರ ಬಗ್ಗೆ ಖಾಸಗಿ ಸಂದರ್ಶನದಲ್ಲಿ ಕಲರ್ಸ್‌ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್‌ ಪರಮೇಶ್ವರ್ ಗುಂಡ್ಕಲ್ ಮಾತನಾಡಿದ್ದಾರೆ.

ಮಂಜು ಅವರಿಗೆ 45 ಲಕ್ಷ ವೋಟ್ ಬಂದಿವೆ, ಅರವಿಂದ್ ಅವರಿಗೆ 43 ಲಕ್ಷ ವೋಟ್ಸ್ ಬಂದಿವೆ. ಯಾರೇ ಗೆದ್ದರೂ ಉಳಿದವರು ನನ್ನನ್ನು ಬೈಯ್ಯತ್ತಾರೆ. ಇಂಡಿಯಾವನ್ನು ಪ್ರತಿನಿಧಿಸಿರುವ ವ್ಯಕ್ತಿ, ಚಾಂಪಿಯನ್ ಎಷ್ಟು ಸಾಧನೆ ಮಾಡಿದ್ದಾರೆ ಎಂದು ಜನರಿಗೆ ಗೊತ್ತಾಗಿದ್ದು ಬಿಗ್ ಬಾಸ್‌ನಿಂದ. ಇಬ್ಬರೂ ನನಗೆ ಥ್ಯಾಂಕ್ಸ್ ಹೇಳಿಲ್ಲ. ಅರವಿಂದ್ ಹಾಗೂ ದಿವ್ಯಾ ಫ್ಯಾನ್ಸ್‌ಗೆ ನನ್ನದೊಂದು ಪ್ರಶ್ನೆ ಇದೆ. ಅವರಿಬ್ಬರೂ ಭೇಟಿ ಆಗಿದ್ದು ನಮ್ಮ ಶೋನಲ್ಲಿ, ದಿವ್ಯಾ ಅವರನ್ನು ಮಾತನಾಡಿಸಿ ಕೂರಿಸಿ ಕರೆದುಕೊಂಡು ಬಂದಿದ್ದು ನಾನು, ಅರವಿಂದ್ ಅವರನ್ನು ಕರೆದುಕೊಂಡು ಬಂದಿದ್ದು ನಾನು. ಇವತ್ತಿಗೆ ಇಷ್ಟು ಬೈಯುತ್ತಿದ್ದಾರೆ ಅಲ್ವಾ? ಕಾಮೆಂಟ್ ಮಾಡಿ ಅವರು ಯಾರೂ ಅರವಿಂದ್ ಅವರಿಗೆ ಏನೂ ಮಾಡಿಲ್ಲ. ಅವರಿಬ್ಬರೂ ಒಂದಾಗಲು ಕಾರಣ ಆಗಿದ್ದ ನನ್ನನ್ನ ಅವರ ಫ್ಯಾನ್ಸ್ ಬಾಯಿಗೆ ಬಂದ್ಹಾಗೆ ಬೈಯುತ್ತಾರೆ,’ ಎಂದು ಮಾತನಾಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top