fbpx
ಸಮಾಚಾರ

ನಾಥೂರಾಮ್ ಗೋಡ್ಸೆಗೆ ಜೈ ಎಂದ ‘ಸೈಕೋ’ ನಟಿ ಅನಿತಾ ಭಟ್: ನೆಟ್ಟಿಗರಿಂದ ತರಾಟೆ

ಸೈಕೋ ಚಿತ್ರದ ಖ್ಯಾತಿಯ ನಟಿ ಅನಿತಾ ಭಟ್ ಇತ್ತೀಚಿಗೆ ಸಿನಿಮಾ ವಿಚಾರಗಳಿಗೆ ಬಿಟ್ಟು ಕೇವಲ ವಿವಾದಗಳಿಂದ ಮಾತ್ರವೇ ಸುದ್ದಿಯಾಗುತ್ತಿದ್ದಾರೆ. ಈಗ ಅನಿತಾ ಭಟ್ ಬ್ರಾಹ್ಮಣ್ಯ, ಗಾಂಧೀಜಿ ಕೊಂದ ನಾಥೂರಾಮ್ ಗೋಡ್ಸೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅನಿತಾ ಭಟ್ ಅವರು ರಾಷ್ಟ್ರಪಿತನನ್ನ ಕೊಂಡ ಗೋಡ್ಸೆಯನ್ನು ಹೊಗಳಿ ಟ್ವೀಟ್ ಮಾಡಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ.

 

 

ಟ್ವೀಟ್‍ನಲ್ಲಿ ಏನಿದೆ?
ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಾಮೆಂಟ್ ಮಾಡಿದ್ದಾರೆ.

ನಟಿ ಮುಂದುವರೆದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ

ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top