fbpx
ಸಮಾಚಾರ

ಆಗಸ್ಟ್ 19: ಇಂದಿನ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 19, 2021 ಗುರುವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಾದಶೀ 10:53 pm
ನಕ್ಷತ್ರ : ಪೂರ್ವಾಷಾಢ 10:42 pm
ಯೋಗ : ಪ್ರೀತಿ 6:18 pm
ಕರಣ : ಬಾವ 11:58 am ಬಾಲವ 10:53 pm

Time to be Avoided
ರಾಹುಕಾಲ : 1:56 pm – 3:29 pm
ಯಮಗಂಡ : 6:11 am – 7:44 am
ದುರ್ಮುಹುರ್ತ : 10:19 am – 11:08 am, 3:16 pm – 4:06 pm
ವಿಷ : 9:09 am – 10:39 am
ಗುಳಿಕ : 9:17 am – 10:50 am

Good Time to be Used
ಅಮೃತಕಾಲ : 6:11 pm – 7:41 pm
ಅಭಿಜಿತ್ : 11:58 am – 12:47 pm

Other Data
ಸೂರ್ಯೋದಯ : 6:07 am
ಸುರ್ಯಾಸ್ತಮಯ : 6:38 pm
ರವಿರಾಶಿ : ಸಿಂಹ
ಚಂದ್ರರಾಶಿ : ಧನುಸ್ upto 28:21+

 

 

ನೀವು ನಂಬಿದ್ದ ನಿಮ್ಮ ಹತ್ತಿರದವರು ನಿಮಗೆ ಬೇಸರವಾಗುವಂತೆ ನಿಮ್ಮ ವಿರುದ್ಧ ವೈರ ಸಾಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರದಿಂದ ಇರುವುದು ಒಳ್ಳೆಯದು. ಮಕ್ಕಳ ಕಲರವ ನಿಮಗೆ ಹೆಚ್ಚಿನ ಸಂತೋಷ ಉಂಟು ಮಾಡುವುದು.

ಕಾರಣವಿಲ್ಲದೆ ಜಗಳಕ್ಕೆ ಬರುವವರ ಬಗ್ಗೆ ಎಚ್ಚರವಿರಲಿ. ಇಂತಹ ಜನರನ್ನು ದೂರವಿಡುವುದು ಒಳಿತು. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಆಲಿಸಿ ಮತ್ತು ಪಾಲಿಸಿ. ಇದರಿಂದ ಶುಭವಾಗುವುದು.

ರಸ್ತೆಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳುವಿರಿ. ಈ ಬಗ್ಗೆ ಜಾಗ್ರತೆಯಿಂದ ಇರಿ.

ಒತ್ತಡದಲ್ಲಿ ಸಿಲುಕಿಕೊಳ್ಳುವ ಸಂಭವ ಜಾಸ್ತಿ ಇದೆ. ಯಾರಿಗೂ ಯೋಚಿಸದೆ ಹಣ ಅಥವಾ ಮಾತು ಕೊಡಲು ಮುಂದಾಗದಿರಿ. ಕೊಟ್ಟ ಹಣ ವಾಪಸ್ಸು ಬರದೆ ಇರುವ ಸಾಧ್ಯತೆ ಇದೆ. ನಿಮ್ಮ ಕುಲದೇವರನ್ನು ಸ್ಮರಿಸಿ.

 

ಪರಮ ಸ್ವಾಭಿಮಾನಿಗಳಾದ ನೀವು ಸಾಧಿಸಬೇಕಾದ ಕೆಲಸವನ್ನು ಪೂರ್ಣಗೊಳಿಸುವಿರಿ. ಇದರಿಂದ ನೀವಷ್ಟೇ ಅಲ್ಲದೆ ನಿಮ್ಮ ಕುಟುಂಬದ ಸದಸ್ಯರು ಸಂತೋಷಪಡುವರು. ಆದರೆ ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ.

 

ವ್ಯಕ್ತಿತ್ವದ ವಿಚಾರದಲ್ಲಿ ಹೊಸ ಎತ್ತರ ಪಡೆಯಲು ಸಂಬಂಧಿಕರು ಸಹಾಯ ಮಾಡುವರು. ಇದರಿಂದ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಹೆಚ್ಚಲಿವೆ. ಆತ್ಮೀಯರು ನಿಮ್ಮನ್ನು ಸನ್ಮಾನಿಸುವ ಸಾಧ್ಯತೆ ಇದೆ.

 

 

ಬಾಳಸಂಗಾತಿ ಸಲಹೆ ಸಹಕಾರಗಳನ್ನು ಸ್ವೀಕರಿಸಿ. ಅಂತೆಯೆ ತಂದೆ ತಾಯಿಯ ಮಾತನ್ನು ಪೂರ್ಣಗೊಳಿಸುವುದು ಒಳ್ಳೆಯದು. ಇದರಿಂದ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.

 

 

ಕೆಟ್ಟ ಹಠದಿಂದ ದುರ್ಯೋಧನ ಬಿದ್ದ. ಹಠ ಯಾರಿಗೂ ಒಳ್ಳೆಯದಲ್ಲ. ಆದರೆ ನಿಮ್ಮ ಹಠದಿಂದ ಸಾಂಸಾರಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಬರುವುದು. ಕೋಪ ಹಾಗೂ ಹಠವನ್ನು ನಿಯಂತ್ರಿಸಿಕೊಳ್ಳದೆ ಇದ್ದಲ್ಲಿ ತೊಂದರೆ ಅನುಭವಿಸಿರಿ.

 

ಮನದಾಳದ ಚಿಂತನೆಗಳನ್ನು ದೂರಮಾಡಿ ಒಳಿತುಗಳನ್ನು ಪಡೆಯುವ ಸಿದ್ದಿಯನ್ನು ಕಂಡುಕೊಳ್ಳುವಿರಿ. ಇದಕ್ಕೆ ಪೂರಕವಾಗಿ ಬಂಧುಗಳು ಮತ್ತು ಸ್ನೇಹಿತರು ಸಹಾಯಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಹಂತ ಹಂತವಾಗಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಉಂಟಾಗುವುದು. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು.

 

ಹಿರಿಯರು ನಡೆಸಿದ ಆದರ್ಶ ಜೀವನ, ನಿಮ್ಮ ಬದುಕಿನ ದೀಪವಾದ್ದರಿಂದ ನಿಮಗೆ ಆನಂದ ಉಂಟಾಗಲಿದೆ. ಅಂತೆಯೇ ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ ಮತ್ತು ನಿಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಗಮನ ಹರಿಸುವುದು ಒಳ್ಳೆಯದು.

 

ಸುಮ್ಮನೆ ಮತ್ತೊಬ್ಬರಿಗೆ ಅನುಕಂಪ ತೋರಿ ಹಣದ ಸಹಾಯ ಮಾಡದಿರಿ. ನಿಮ್ಮ ಹೃದಯ ವೈಶಾಲ್ಯವನ್ನು ಇತರರು ದುರುಪಯೋಗ ಪಡಿಸಿಕೊಳ್ಳುವರು. ಇದರಿಂದ ಮಾನಸಿಕ ಚಿಂತೆಗಳು ಹೆಚ್ಚು ಕಾಡುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top