fbpx
ಸಮಾಚಾರ

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಆಸ್ಪತ್ರೆಗೆ ದಾಖಲು

ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್​ ಥ್ರೋ ವಿಭಾಗದಲ್ಲಿ ಭಾರತಕ್ಕಾಗಿ ಮೊದಲ ಚಿನ್ನದ ಪದಕವನ್ನು ಜಯಯಿಸಿದ್ದ ಒಲಿಂಪಿಕ್ ವಿಜೇತ ನೀರಜ್​ ಚೋಪ್ರಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತೀವ್ರ ಜ್ವರ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

ಟೋಕಿಯೋದಿಂದ ವಾಪಸಾದ ಬಳಿಕ ನೀರಜ್‌ಗೆ ಜ್ವರ ಕಾಣಿಸಿಕೊಂಡಿತ್ತು‌, ಆರೋಗ್ಯ ಸಮಸ್ಯೆಯ ನಡುವೆಯೂ ನಿರಂತರ ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಂಗಳವಾರ ದೆಹಲಿಯಿಂದ ತಮ್ಮ ತವರೂರು ಹರಾರ‍ಯಣದ ಪಾಣಿಪತ್‌ಗೆ ಚೋಪ್ರಾ ಅವರನ್ನು ರೋಡ್‌ ಶೋ ಮೂಲಕ ಕರೆತರಲಾಯಿತು. ಪಾಣಿಪತ್‌ನಲ್ಲಿ ನಡೆಯುತ್ತಿದ್ದ ಅಭಿನಂದನಾ ಕಾರ‍್ಯಕ್ರಮದ ವೇಳೆ ತೀವ್ರ ಜ್ವರ ಕಾಣಿಸಿಕೊಂಡ ಕಾರಣ, ಕಾರ‍್ಯಕ್ರಮದ ಮಧ್ಯೆದಲ್ಲೇ ಎದ್ದು ಚೋಪ್ರಾ ಆಸ್ಪತ್ರೆಗೆ ತೆರಳಿದರು. ಅಲ್ಲದೇ ಪಾಣಿಪತ್‌ ಸಮೀಪವಿರುವ ಚೋಪ್ರಾ ಅವರ ಹಳ್ಳಿ ಖಂಡ್ರಾದಲ್ಲಿ ಮಂಗಳವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕೆಲ ದಿನಗಳ ಹಿಂದೆಯೂ ನೀರಜ್‌ಗೆ ಜ್ವರ ಬಂದಿತ್ತು. ಆದರೆ, ಆ ಸಮಯದಲ್ಲಿ ಕೊರೋನಾ ವೈರಸ್‌ಗೆ ನೆಗೆಟಿವ್ ವರದಿ ಬಂದಿತ್ತು. ಅಲ್ಲದೆ, ಅವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಸಲುವಾಗಿ ಶೀಘ್ರದಲ್ಲಿ ಚೇತರಿಸಿಕೊಂಡಿದ್ದರು. ಆದರೆ, ಮಂಗಳವಾರ ಮತ್ತೆ ಅವರಿಗೆ ಜ್ವರ ಕಾಣಿಸಿಕೊಂಡಿದ್ದು ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top