fbpx
ಸಮಾಚಾರ

“ನಮ್ಮನ್ನು ಸಾಯಲು ಬಿಡಬೇಡಿ” ಖ್ಯಾತ ಕ್ರಿಕೆಟಿಗ ರಶೀದ್ ಖಾನ್ ಅಳಲು

ಸ್ತುತ ಅಫ್ಘಾನಿಸ್ಥಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಹಾಗೂ ಸರ್ಕಾರದ ಸೈನ್ಯಗಳ ನಡುವೆ ಭೀಕರ ಕಾಳಗ ನಡೆಯುತ್ತಿದೆ. ದೇಶದ ಹೊರಭಾಗದ ಮೇಲೆ ಈಗಾಗಲೇ ತಾಲಿಬಾನ್ ತನ್ನ ಹಿಡಿತ ಸಾಧಿಸಿದೆ ಹಾಗೂ ಇದೀಗ ಪ್ರಾಂತ್ಯಗಳ ರಾಜಧಾನಿಗಳತ್ತ ಮುಖಮಾಡಿದೆ. ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ತಾಲಿಬಾನ್, ಅಫ್ಘಾನಿಸ್ತಾನದ ಶೇ.80 ರಷ್ಟು ಭಾಗವನ್ನು ವಶಕ್ಕೆ ಪಡೆದಿದೆ.

 

 

ಈ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ದೇಶಗಳ ನಾಯಕರಿಗೆ ಆ ದೇಶದ ಸ್ಟಾರ್ ಕ್ರಿಕೆಟರ್ ರಶೀದ್ ಖಾನ್ ಅವರು ತಮ್ಮ ದೇಶ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ವಿಶ್ವ ನಾಯಕರೆಲ್ಲಾ ಒಂದಾಗಿ ತನ್ನ ದೇಶವನ್ನು ರಕ್ಷಿಸಿ, ಶಾಂತಿ ಸ್ಥಾಪಿಸಬೇಕೇಂದು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ. ನನ್ನ ದೇಶ ಅತ್ಯಂತ ಸಂಕಷ್ಟದಲ್ಲಿದೆ. ಪ್ರತಿದಿನ ಸಾವಿರಾರು ಅಮಾಯಕರು ಮಕ್ಕಳು ಹಾಗೂ ಮಹಿಳೆಯರು ಹುತಾತ್ಮರಾಗುತ್ತಿದ್ದಾರೆ. ಮನೆ, ಮಠ, ಆಸ್ತಿ ಪಾಸ್ತಿಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ರಶೀದ್ ಖಾನ್ ಟ್ವೀಟ್ ಸಾರಾಂಶ ಈ ರೀತಿ ಇದೆ:
“ಪ್ರೀತಿಯ ವಿಶ್ವ ನಾಯಕರೆ! ನನ್ನ ದೇಶ ಇಂದು ಸಂಕಷ್ಟದ ಸ್ಥಿತಿಯಲ್ಲಿದೆ. ಸಾವಿರಾರು ಅಮಾಯಕ ಜನರು, ಮಕ್ಕಳು ಮತ್ತು ಮಹಿಳೆಯರು ಪ್ರತಿದಿನ ಜೀವ ಕಳೆದುಕೊಳ್ಳುತ್ತಿದ್ದಾರೆ. ಮನೆಗಳು ಮತ್ತು ಕಟ್ಟಡಗಳು ಇಂದು ನಾಶವಾಗುತ್ತಿವೆ. ಸಾವಿರಾರು ಕುಟುಂಬಗಳು ಛಿದ್ರ ಛಿದ್ರವಾಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಕೈಬಿಡಬೇಡಿ. ಆಫ್ಘನ್ ಜನರನ್ನು ಕೊಲ್ಲುವುದನ್ನು ನಿಲ್ಲಿಸಿ. ಅಫಘಾನಿಸ್ತಾನವನ್ನು ನಾಶ ಮಾಡಬೇಡಿ. ನಮಗೆ ಶಾಂತಿ ಬೇಕಿದೆ,” ಎಂದು ರಶೀದ್ ಖಾನ್ ಟ್ವೀಟ್‌ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top