fbpx
ಸಮಾಚಾರ

ವಿಕೆಟ್‌ ಪಡೆದಾಗಲೆಲ್ಲಾ ತುಟಿಯ ಮೇಲೆ ಬೆರಳಿಟ್ಟು ‘ಶ್‌..’ ಎಂದು ಸಂಭ್ರಮಿಸುವುದಕ್ಕೆ ಕಾರಣ ತಿಳಿಸಿದ ಸಿರಾಜ್!

ಭಾರತ ತಂಡದ ಪ್ರಮುಖ ಬೌಲರ್ ಆಗಿ ಪರಿಣಮಿಸಿರುವ ಯುವ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದ ಬಳಿಕ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡುವುದನ್ನು ಎಲ್ಲರೂ ನೋಡಿದ್ದೇವೆ. ಈ ಸಂಭ್ರಮಾಚರಣೆಯ ಹಿಂದಿನ ಅಸಲಿ ಕಹಾನಿಯನ್ನು ಸ್ವತಃ ಅವರೇ ಇದೀಗ ರಿವೀಲ್ ಮಾಡಿದ್ದಾರೆ.

ತಮ್ಮ ನಿಖರ ದಾಳಿಯ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್ ಗಳನ್ನು ಕಾಡಿದ ಸಿರಾಜ್, ಲಾರ್ಡ್ಸ್ ಟೆಸ್ಟ್ ನಲ್ಲಿ 8 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ 8 ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಪ್ರತಿ ವಿಕೆಟ್ ಪಡೆದಾಗಲೂ ಕೂಡ ಸಿರಾಜ್ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡಿದ್ದನ್ನು ಗಮನಿಸಿ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು.

ನನ್ನ ಈ ರೀತಿಯ ಆಚರಣೆ ನನ್ನನ್ನು ದ್ವೇಷಿಸುವವರಿಗಾಗಿ(ವಿಮರ್ಶಕರು) ಏಕೆಂದರೆ ಅವರು ನನ್ನ ಬಗ್ಗೆ ಬಹಳಷ್ಟು ಮಾತುಗಳನ್ನು ಹೇಳುತ್ತಿದ್ದರು. ನನ್ನಿಂದ ಅದನ್ನು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸುತ್ತಿದ್ದರು. ಹೀಗಾಗಿ ನಾನು ನನ್ನ ಎಸೆತಗಳ ಮೂಲಕ ಹೇಟರ್ಸ್ ಗಳಿಗೆ ಉತ್ತರಿಸುತ್ತೇನೆ. ಇದು ನನ್ನ ಹೊಸ ಶೈಲಿಯ ಆಚರಣೆಯಾಗಿದೆ ಎಂದು ಸಿರಾಜ್ ಹೇಳಿದ್ದಾರೆ.

“ಇಂಗ್ಲೆಂಡ್‌ನಲ್ಲಿ ವೇಗದ ಬೌಲರ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ನೇರ ಮತ್ತು ನಿಖರತೆಯಲ್ಲಿ ಬೌಲಿಂಗ್‌ ಮಾಡುವುದು ನಮ್ಮ ರಣತಂತ್ರ. ರಣಜಿ ಕ್ರಿಕೆಟ್‌ ಆಡುವಾಗಲೂ ನಾನು ಒಂದೇ ನಿಖರತೆಯಲ್ಲಿ ಬೌಲಿಂಗ್ ಮಾಡುತ್ತಿದ್ದೆ. ಇಲ್ಲು ಕೂಡ ಅದನ್ನೇ ಮಾಡಿದೆ,” ಎಂದು ಸಿರಾಜ್ ವಿವರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top