fbpx
ಸಮಾಚಾರ

ಲವ್ ಯೂ ರಚ್ಚು ಫೈಟರ್ ದುರ್ಮರಣ: ಪರಿಹಾರ ಕೊಡ್ತೀವಿ ಎಂದು ಕೈ ಎತ್ತಿದ ಚಿತ್ರತಂಡ, ವಿವೇಕ್ ತಾಯಿ ಅಳಲು

ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್​ಅಭಿನಯದ ಸಿನಿಮಾ ಲವ್​ ಯೂ ರಚ್ಚು ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್​ ಅವರು ಸಾವನ್ನಪ್ಪಿದ್ದರು. ಶೂಟಿಂಗ್ ವೇಳೆ ಕರೆಂಟ್ ಹೊಡೆದು ಫೈಟರ್​ ಸಾವನ್ನಪ್ಪಿ ಒಂದು ವಾರ ಕಳೆದರೂ ಚಿತ್ರತಂಡದಿಂದ ಮೃತನ ಕುಟುಂಬಕ್ಕೆ ಇಲ್ಲಿವರೆಗೂ ನೆರವು ಸಿಕ್ಕಿಲ್ಲ.

ರ್ರ್ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೃತ ಸಾಹಸ ಕಲಾವಿದ ವಿವೇಕ್ ತಾಯಿ ಜಿ. ಉಮಾ ಅಳಲು ತೋಡಿಕೊಂಡಿದ್ದಾರೆ. “ನಮ್ಮ ಸಹಾಯಕ್ಕೆ ಯಾರೂ ಬಂದಿಲ್ಲ.. ನಮಗೆ ನಿರ್ಮಾಪಕರು ಯಾವುದೇ ಹಣ ಕೊಟ್ಟಿಲ್ಲ. ನಿರ್ಮಾಪಕ ಗುರು ದೇಶ್ ಪಾಂಡೆ ಪತ್ನಿ 5 ಲಕ್ಷದ ಚೆಕ್‌ ಕೊಡೋದಾಗಿ ಮಾಧ್ಯಮದಲ್ಲಿ ಹೇಳಿದ್ದರು. ಆದರೆ, ಯಾವುದೇ ಹಣ ಕೊಟ್ಟಿಲ್ಲ.‌ ಜೀವನಕ್ಕೆ ಆಧಾರವಾಗಿದ್ದ ನನ್ನ ಮಗ ವಿವೇಕ್ ಈಗ ನಮ್ಮನ್ನು ಕೇಳೋರು ಯಾರು‌ ಇಲ್ಲ.

ಚಿತ್ರರಂಗದ ವತಿಯಿಂದಲೂ ಯಾರೂ ಸಹಾಯ ಮಾಡಿಲ್ಲ, ಸಹಾಯ ಮಾಡೋದಿರಲಿ ಹೇಗಿದ್ದೀರಿ, ಜೀವನ ಹೇಗೆ ಮಾಡ್ತಿದ್ದೀರಿ ಅಂತನೂ ವಿಚಾರಿಸಿಲ್ಲ. ಫಿಲ್ಮ್‌ ಚೇಂಬರ್ ನವರಿಗೆ ಮನವಿ ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ಪರಿಹಾರ ಸಿಗೋ ಹಾಗೆ ಮಾಡುತ್ತೇವೆ ಎಂದಿದ್ದಾರೆ” ಎಂದು ವಿವೇಕ್ ತಾಯಿ ಉಮಾ‌ ಹೇಳಿಕೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top