fbpx
ಸಮಾಚಾರ

ಸಾವಿನ ಮನೆಯಲ್ಲಿ ಧರಿಸಿದ ಡ್ರೆಸ್ ಮಾರಾಟ ಮಾಡಿದ ದೀಪಿಕಾ: ಛೀಮಾರಿ ಹಾಕಿದ ನೆಟ್ಟಿಗರು

ಸ್ಟಾರ್ ಸೆಲೆಬ್ರಿಟಿಗಳು ತಾವು ಧರಿಸಿದ ದುಬಾರಿ ಬಟ್ಟೆಗಳನ್ನು ಆನ್‌ಲೈನ್ ಮೂಲಕ ಹರಾಜು ಮಾಡುವುದು ಹೊಸದೇನಲ್ಲ. ಸಾಮಾನ್ಯವಾಗಿ ಕಿರುತೆರೆಯಿಂದ ಬೆಳ್ಳಿ ಪರದೆ ತನಕ ಬಹಳಷ್ಟು ನಟಿಯರು ಇದನ್ನು ಮಾಡುತ್ತಾರೆ. ತಮ್ಮ ಸ್ಪೆಷಲ್ ಡ್ರೆಸ್, ಯಾವುದೋ ವೀಶೇಷ ಸಂದರ್ಭದ ಬಟ್ಟೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಇದರಿಂದ ಬರುವ ಹಣವನ್ನು ಒಳ್ಳೆ ಕೆಲಸಗಳಿಗಾಗಿ ಬಳಸುತ್ತಾರೆ. ಆದರೆ ದೀಪಿಕಾ ಪಡುಕೋಣೆ ಮರು ಮಾರಾಟ ಮಾಡ್ತಿರೋದೇನು ಗೊತ್ತಾ ?

ನಟಿ ದೀಪಿಕಾ ಪಡುಕೋಣೆ ‘ The Live Love Laugh Foundation’ ಬೆಂಬಲಿಸುವ ಸಲುವಾಗಿ ಅವರ ಬಟ್ಟೆಗಳನ್ನು ಹರಾಜಿಗೆ ಇಡುತ್ತಿದ್ದಾರೆ. ಆ ಹರಾಜಿನಿಂದ ಬಂದ ಹಣವನ್ನು ಅವರು ಈ ಫೌಂಡೇಶನ್‌ಗೆ ನೀಡಲಿದ್ದಾರೆ. ಹೀಗಾಗಿ ದೀಪಿಕಾ ಎರಡು ಕುರ್ತಾಗಳನ್ನು ಹರಾಜಿಗೆ ಇಟ್ಟಿದ್ದರು. ಆ ಬಟ್ಟೆಗಳನ್ನು ಎರಡು ದುರಂತದ ಸಂದರ್ಭದ ವೇಳೆ ಧರಿಸಿದ್ದರು. ಹೀಗಾಗಿ ನೆಟ್ಟಿಗರು ಗರಂ ಆಗಿದ್ದಾರೆ.

 

 

ಒಂದು ಕುರ್ತಾವನ್ನು ನಟಿ ಜಿಯಾ ಖಾನ್ ಅವರ ಅಂತ್ಯಕ್ರಿಯೆ ವೇಳೆ ದೀಪಿಕಾ ಧರಿಸಿದ್ದರು, ಇನ್ನೊಂದು ಕುರ್ತಾವನ್ನು ನಟಿ ಪ್ರಿಯಾಂಕಾ ಚೋಪ್ರಾ ಅವರ ತಂದೆಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಹಾಕಿಕೊಂಡಿದ್ದರು. ನಟಿ, ಗಾಯಕಿ ಜಿಯಾ ಖಾನ್ ಅವರು ಮುಂಬೈನ ಅವರ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 2013ರಲ್ಲಿ ಈ ಘಟನೆ ನಡೆದಿತ್ತು. ಜಿಯಾ ಅಂತ್ಯಕ್ರಿಯೆಗೆ ದೀಪಿಕಾ ಹೋಗಿದ್ದರು.

ಮಾಯಾ ಎಂಬವರು ತಮ್ಮ ಟ್ವಿಟರ್ ಖಾನೆಯಲ್ಲಿ ಈ ಕುರಿತಾಗಿ ಫೋಟೋ ಸಹಿತ ಮಾಹಿತಿ ನೀಡಿದ್ದಾರೆ. ದೀಪಿಕಾ ಪಡುಕೋಣೆ ಅವರು ಸೆಲೆಬ್ರಿಟಿಗಳ ಸಾವನ್ನಪ್ಪಿದಾಗ ಅವರ ಅಂತಿಮ ದರ್ಶನಕ್ಕೆ ಹೋಗಿದ್ದಾಗ ಧರಿಸಿದ್ದ ಡ್ರೆಸ್​ಗಳನ್ನು ಆನ್​ಲೈನ್​ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ದೀಪಿಕಾ ಮಾಡಿದ್ದು ಎಷ್ಟು ಸರಿ ಎಂದು ಮಾಯಾ ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಬಟ್ಟೆಗಳನ್ನು ಮಾರಲು ಇಡುವ ಬದಲು ಚಾರಿಟಿಗೆ ನೀಡಿದ್ದರೆ ಮೆಚ್ಚಿಕೊಳ್ಳಬಹುದಿತ್ತು ಎಂದಿದ್ದಾರೆ.

ಮಾಯಾ ಅವರು ಮಾಡಿರುವ ಟ್ವೀಟ್​ಗೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಇದು ದಾನಕ್ಕಾಗಿ ಮಾಡುತ್ತಿರುವ ಮಾರಾಟ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮಾಯಾ, ಸಾಮಾನ್ಯ ಬ್ರ್ಯಾಂಡ್​ನ ಬಟ್ಟೆಗಳನ್ನು ಹೀಗೆ ಮಾರಾಟ ಮಾಡಲು ಸಾಧ್ಯವಿಲ್ಲ. 2,700 ಹಾಗೂ 8 ಸಾವಿರ ಮಾಲ್ಯದ ಹಳೇ ಬಟ್ಟೆಗಳನ್ನು ಬಟ್ಟೆಗಳನ್ನು ಯಾರಿಗಾದರೂ ದಾನವಾಗಿ ನೀಡಬಹುದಿತ್ತಲೇ ಎಂದು ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top