fbpx
ಸಮಾಚಾರ

ಗ್ರಾಹಕರಿಗೆ ಶಾಕ್: ಸಿಲಿಂಡರ್ ಬೆಲೆ 25 ರೂ. ಹೆಚ್ಚಳ! ಪ್ರಮುಖ ನಗರಗಳಲ್ಲಿ ಬೆಲೆ ವಿವರ ಹೀಗಿದೆ

ಬೆಲೆ ಏರಿಕೆಯ ಸಂಕಷ್ಟದಲ್ಲಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೆ ಶಾಕ್‌ ನೀಡಿದೆ. ಬುಧವಾರದಿಂದ ಜಾರಿಯಾಗುವಂತೆ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 25 ರು.ನಷ್ಟುಹೆಚ್ಚಿಸಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 14.5 ಕೆಜಿ ಸಿಲಿಂಡರ್‌ ಬೆಲೆ 837 ರು.ಗೆ ಏರಿದೆ. ಕಳೆದ ಜು.1ರಂದು 25 ರು. ಏರಿಕೆಯಾಗಿತ್ತು. ಇದೀಗ ಸತತ ಎರಡನೇ ತಿಂಗಳೂ ಬೆಲೆ ಏರಿಕೆ ಮಾಡಲಾಗಿದೆ.

ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್ ಪಿಜಿ ಸಿಲೆಂಡರ್ ಬೆಲೆ ಈಗ 859 ರೂಪಾಯಿ 5 ಪೈಸೆಯಾಗಿದೆ. ನಿನ್ನೆಯವರೆಗೆ 834 ರೂಪಾಯಿ 50 ಪೈಸೆಯಾಗಿತ್ತು. ಕಳೆದ ಜುಲೈ 1ರಂದು ಎಲ್ ಪಿಜಿ ಸಿಲೆಂಡರ್ ಬೆಲೆ 25 ರೂಪಾಯಿ 50 ಪೈಸೆ ಹೆಚ್ಚಳವಾಗಿತ್ತು.

ಮುಂಬೈನಲ್ಲಿಯೂ ಸಹ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರ ಈಗ 859.5 ರೂ, ನಿನ್ನೆಯವರೆಗೆ 834.50 ರೂ ಆಗಿತ್ತು. ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಪ್ರತಿ ಸಿಲಿಂಡರ್‌ಗೆ ರೂ 861 ರಿಂದ ರೂ 886 ಕ್ಕೆ ಏರಿಕೆಯಾಗಿದೆ. ಚೆನ್ನೈನ ಎಲ್‌ಪಿಜಿ ಸಿಲಿಂಡರ್‌ಗಾಗಿ ಇಂದಿನಿಂದ 875.50 ರೂಗಳನ್ನು ಪಾವತಿಸಬೇಕಾಗುತ್ತದೆ, ಅದು ನಿನ್ನೆಯವರೆಗೆ 850.50 ರೂಪಾಯಿ ಆಗಿತ್ತು.

ಉತ್ತರ ಪ್ರದೇಶದ ಲಕ್ನೋದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಾಗಿ 897.5 ರೂ. ಪಾವತಿಸಬೇಕಾಗುತ್ತದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಎಲ್‌ಪಿಜಿಗೆ 866.50 ರೂಪಾಯಿ ಪಾವತಿಸಬೇಕಾಗುತ್ತದೆ.

ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷದ ಡಿಸೆಂಬರ್ ಬಳಿಕ ಹಲವು ಬಾರಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದೆ. ತೈಲ ಬೆಲೆಗಳು ಏರಿಕೆಯಾದರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಸಿಲಿಂಡರ್ ಬೆಲೆ ಹೆಚ್ಚಳವಾದರೆ ಹೋಟೆಲ್‌ಗಳಲ್ಲಿ ತಿನಿಸುಗಳ ಬೆಲೆ ಏರಿಕೆಯಾಗುತ್ತದೆ. ರಸ್ತೆ ಬದಿಯಲ್ಲಿ ಆಹಾರ ಉತ್ಪನ್ನಗಳನ್ನು ಮಾರುವ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top