fbpx
ಸಮಾಚಾರ

ಆಗಸ್ಟ್ 21: ಇಂದಿನ ಪಂಚಾಂಗ ಮತ್ತು ರಾಶಿ ದಿನಭವಿಷ್ಯ

ಆಗಸ್ಟ್ 21, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಚತುರ್ದಶೀ 6:59 pm
ನಕ್ಷತ್ರ : ಶ್ರವಣ 8:21 pm
ಯೋಗ : ಸೌಭಾಗ್ಯ 12:55 pm
ಕರಣ : ಗರಿಜ 7:52 am ವಾಣಿಜ 6:59 pm

Time to be Avoided
ರಾಹುಕಾಲ : 9:17 am – 10:49 am
ಯಮಗಂಡ : 1:55 pm – 3:28 pm
ದುರ್ಮುಹುರ್ತ : 6:11 am – 7:00 am, 7:00 am – 7:50 am
ವಿಷ : 12:14 am – 1:47 am
ಗುಳಿಕ : 6:11 am – 7:44 am

Good Time to be Used
ಅಮೃತಕಾಲ : 10:24 am – 11:56 am
ಅಭಿಜಿತ್ : 11:57 am – 12:47 pm

Other Data
ಸೂರ್ಯೋದಯ : 6:07 am
ಸುರ್ಯಾಸ್ತಮಯ : 6:37 pm
ರವಿರಾಶಿ : ಸಿಂಹ
ಚಂದ್ರರಾಶಿ : ಮಕರ

 

 

&nbsp

ಕೆಲಸದ ಸ್ಥಳದಲ್ಲಿ ಒತ್ತಡ ಇದ್ದರೂ ಕೆಲ ಪರಿಣಾಮಕಾರಿ ಹಂತಕ್ಕೆ ಏರುವ ಮುನ್ಸೂಚನೆಗಳು ನಿಮಗೆ ಗೋಚರಿಸುವುದು. ನಿಮ್ಮ ಕುಟುಂಬದ ಇಷ್ಟದೇವತೆಯನ್ನು ಭೇಟಿ ಮಾಡಿ. ಚಿಕ್ಕ ಮಕ್ಕಳೊಂದಿಗೆ ಸಂಜೆ ಸಂತೋಷವಾಗಿ ಕಳೆಯುವಿರಿ.

ನಿಮ್ಮ ಮಾತುಗಳು ಇತರರು ಕೇಳುತ್ತಿಲ್ಲ ಅಥವಾ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಅದಕ್ಕಾಗಿ ಚಿಂತಿಸುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ಶುಭ ದಿನವಾಗಿದೆ.

ಬರಿ ಮಾತಿನ ಮಂಟಪವನ್ನು ಕಟ್ಟುವ ಕೆಲಸ ಮಾಡುತ್ತಿದ್ದರೆ ಮಹತ್ವದ ವಿಚಾರವೊಂದು ಕೈತಪ್ಪಲಿದೆ ಹಾಗಾಗಿ ವಾಸ್ತವ ಬದುಕಿನ ಕಡೆಗೂ ಗಮನ ಹರಿಸುವುದು ಒಳ್ಳೆಯದು.

ಅನಿರೀಕ್ಷಿತವಾಗಿ ವ್ಯಕ್ತಿಯೊಬ್ಬರು ನಿಮ್ಮನ್ನು ಭೇಟಿ ಆಗಲಿರುವರು. ಇದರಿಂದ ನಿಮಗೆ ವೈಯಕ್ತಿಕವಾಗಿಯೂ, ವ್ಯಾಪಾರ, ವ್ಯವಹಾರದಲ್ಲಿಯೂ ಶ್ರೇಯಸ್ಸು ಉಂಟಾಗುವುದು. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಏರುವುದು.

 

ನಿಮ್ಮನ್ನು ನೀವು ಗೆಲ್ಲಲು ಪ್ರಯತ್ನಿಸಿ. ಆಗ ಇತರರನ್ನು ಗೆಲ್ಲುವ ಸಿದ್ಧಿಯು ನಿಮಗೆ ಉಂಟಾಗುವುದು. ಆಸ್ತಿ, ಮನೆ ವಿಚಾರಗಳಲ್ಲಿ ಒಂದು ಸಕಾರಾತ್ಮಕ ಭಾವನೆ ಮೂಡುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ಒದಗುವುದು.

 

ತೀರ ಅನಿರೀಕ್ಷಿತ ಬೆಳವಣಿಗೆಯೊಂದರಿಂದ ಅನೇಕ ರೀತಿಯ ಕ್ಲಿಷ್ಟ ಸಂಕಟಗಳಿಗೆ ವಿರಾಮ ಬೀಳುವ ಸಾಧ್ಯತೆ ಇದೆ. ಯಾವುದಕ್ಕೂ ನಿರಾಶರಾಗದಿರುವುದು ಸೂಕ್ತವಲ್ಲ. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ. ಸೂಕ್ತ ಪರಿಹಾರ ದೊರೆಯುವುದು.

 

ಬರಿ ಆಶ್ವಾಸನೆ ಇಲ್ಲವೆ ವಾಗ್ದಾನಗಳಿಂದ ಹೊಟ್ಟೆ ತುಂಬುವುದಿಲ್ಲ. ಹಸಿದವನಿಗೆ ಊಟ ಹಾಕುವುದು ದೊಡ್ಡದಲ್ಲ. ಅವನ ಊಟದ ಬಾಬ್ತನ್ನು ಅವನೇ ಸಂಪಾದಿಸುವಂತೆ ಪ್ರೇರೇಪಿಸುವುದು ಒಳ್ಳೆಯದು.

 

ಎಲ್ಲಾ ಸಂಪತ್ತು ಇದ್ದರೂ ಆರೋಗ್ಯ ಸಂಪತ್ತು ಇಲ್ಲದಿದ್ದರೆ ಯಾವುದನ್ನು ಮನಃಪೂರ್ವಕವಾಗಿ ಅನುಭವಿಸಲು ಆಗುವುದಿಲ್ಲ. ಹಾಗಾಗಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಕುಲದೇವರನ್ನು ಪ್ರಾರ್ಥಿಸಿ.

 

ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ನಿಮ್ಮ ಗುರಿಯು ಬಾಣದಂತೆ ನೇರವಾಗಿರಲಿ. ಬಾಣವು ನಿರ್ದಿಷ್ಟ ಗುರಿಯನ್ನು ತಲುಪಬೇಕೆಂದರೆ ಬಾಣದ ಹಿಂದಿರುವ ಹುರಿಯನ್ನು ಸ್ವಲ್ಪ ಹಿಂದಕ್ಕೆ ತರಲೇಬೇಕಾಗುವುದು. ಹಾಗಾಗಿ ಇಂದಿನ ಸೋಲು ನಾಳಿನ ಗೆಲುವಿಗೆ ದಾರಿ ಆಗುವುದು.

ಕೆಲವು ವಿಚಾರಗಳ ಬಗ್ಗೆ ನೀವು ಅತೀ ಹೆಚ್ಚು ಭಾವುಕರಾಗುವಿರಿ. ಆದರೆ ತೀರ ಭಾವುಕತೆಯಿಂದ ವ್ಯವಹರಿಸುವಾಗ ವೈಫಲ್ಯ ಸಂಭವಿಸುವ ಸಾಧ್ಯತೆ ಇದೆ. ಕೆಲವು ವಿಚಾರಗಳಲ್ಲಿ ದೃಢ ನಿರ್ಧಾರ ತಳೆಯುವುದು ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕವಾಗಿದೆ.

 

ಗುರು,ಹಿರಿಯರ ಆಶೀರ್ವಾದವಿದೆಯೆಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ದುರಾಸೆಯನ್ನು ಅಭಿವ್ಯಕ್ತಿಗೊಳಿಸುವುದು ಸೂಕ್ತವಲ್ಲ. ಪ್ರೀತಿ ಸೌಹಾರ್ದತೆಗಳಿಂದ ಜನರ ಹೃದಯವನ್ನು ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳದಿರಿ.

 

ಮಾನಸಿಕ ದೃಢತೆಯನ್ನು ಸಂಪಾದಿಸಿಕೊಳ್ಳಿ. ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದ ಸುಲಲಿತವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆ ಮಂದಿಯ ಪ್ರೀತಿ ಸೌಹಾರ್ದತೆಗಳು ನಿಮ್ಮನ್ನು ಬೆರಗುಗೊಳಿಸುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top