fbpx
ಸಮಾಚಾರ

IPL 2021: ಆರ್​ಸಿಬಿಗೆ ಬಿಗ್ ಶಾಕ್: ಆಸ್ಟ್ರೇಲಿಯಾದ ಈ ಇಬ್ಬರು ಆಟಗಾರ ಇಡೀ ಟೂರ್ನಿಯಿಂದಲೇ ಹೊರಕ್ಕೆ

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನಿಳಿದ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಭಾಗ-2 ಪಂದ್ಯಾವಳಿಗಳು ಯುಎಇನಲ್ಲಿ ಆರಂಭವಾಗಲಿದ್ದು, ಈಗಿನಿಂದಲೇ ಐಪಿಎಲ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಇಬ್ಬರು ಸ್ಟಾರ್ ಆಟಗಾರರು ಐಪಿಎಲ್-2ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

 

 

ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾ ಐಪಿಎಲ್ 2021 ಫೇಸ್ 2ಗೆ ಲಭ್ಯರಿಲ್ಲದ ಆಟಗಾರರ ಹೆಸರನ್ನು ತಿಳಿಸಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಆರ್​ಸಿಬಿ ಹರಾಜಿನಲ್ಲಿ 4 ಕೋಟಿ ಕೊಟ್ಟು ಖರೀದಿ ಮಾಡಿದ್ದ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಕೇನ್ ರಿಚರ್ಡ್ಸನ್ ಐಪಿಎಲ್ 2021ಕ್ಕೆ ಲಭ್ಯರಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಮತ್ತೊಂದಡೆ ಆಡಂ ಝಾಂಪ ಅವರು ಕೂಡ, ಯುಎಇ ಚರಣದಲ್ಲಿ ಭಾಗವಹಿಸುವುದು ಕೂಡ ಬಹುತೇಕ ಅನುಮಾನವಾಗಿದೆ.

ಅಂದಹಾಗೆ 14ನೇ ಆವೃತ್ತಿಯ ಐಪಿಎಲ್‌ ಆರಂಭವಾದಾಗ ಭಾರತ ಎರಡನೇ ಅಲೆಯ ಕೋವಿಡ್ ಭೀತಿ ಎದುರಿಸುತ್ತಿತ್ತು. ಹೀಗಾಗಿ ಭಾರತದಲ್ಲಿ ಆಯೋಜನೆಯಾಗಿದ್ದ ಐಪಿಎಲ್‌ನ ಬಯೋ ಬಬಲ್‌ ಅಷ್ಟೊಂದು ಸುರಕ್ಷಿತವಾಗಿಲ್ಲ ಎನ್ನುವ ಭೀತಿಯಿಂದ ಕೇನ್ ರಿಚರ್ಡ್‌ಸನ್ ಹಾಗೂ ಆಡಂ ಜಂಪಾ ಆರ್‌ಸಿಬಿ ತಂಡವನ್ನು ಅರ್ಧದಲ್ಲೇ ತೊರೆದು ಆಸ್ಟ್ರೇಲಿಯಾಗೆ ವಾಪಾಸಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top