fbpx
ಸಮಾಚಾರ

RCB ತಂಡದಿಂದ ನಾಲ್ವರು ಔಟ್: ಟೀಮ್​ನಲ್ಲಿ ಮೂರು ಬದಲಾವಣೆ. ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನಿಳಿದ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಭಾಗ-2 ಪಂದ್ಯಾವಳಿಗಳು ಯುಎಇನಲ್ಲಿ ಆರಂಭವಾಗಲಿದ್ದು, ಈಗಿನಿಂದಲೇ ಐಪಿಎಲ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ಮೇಜರ್ ಸರ್ಜರಿ ನಡೆದಿದೆ.

 

 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಬಾರಿ ಮೂರು ಬದಲಾವಣೆ ಮಾಡಿಕೊಳ್ಳಲಿದೆ. ಕಳೆದ ಬಾರಿ ಅರ್ಧದಲ್ಲೇ ಟೂರ್ನಿಯನ್ನು ತೊರೆದಿದ್ದ ಆಸ್ಟ್ರೇಲಿಯಾದ ಆ್ಯಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್​ ದ್ವಿತಿಯಾರ್ಧಕ್ಕೂ ಲಭ್ಯರಿಲ್ಲ. ಹಾಗೆಯೇ ಡೇನಿಯಲ್ ಸ್ಯಾಮ್ಸ್, ನ್ಯೂಜಿಲೆಂಡ್​ನ ಫಿನ್ ಅಲೆನ್ ಹಾಗೂ ಸ್ಕಾಟ್ ಕುಗ್ಗೆಲಿನ್ ಸಹ ಐಪಿಎಲ್ ದ್ವಿತಿಯಾರ್ಧದಿಂದ ಹೊರಗುಳಿದಿದ್ದಾರೆ. ಹೀಗಾಗಿ ಆರ್​ಸಿಬಿ ಮೂವರು ಆಟಗಾರರನ್ನು ಈಗಾಗಲೇ ತಂಡಕ್ಕೆ ಸೇರ್ಪಡಿಸಿಕೊಂಡಿದೆ.

ಆ್ಯಡಂ ಝಂಪಾ ಬದಲಿಗೆ ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ ಬಂದಿದ್ದಾರೆ. ಇನ್ನು ಕೇನ್ ರಿಚರ್ಡ್ಸನ್ ಸ್ಥಾನದಲ್ಲಿ ಮತ್ತೋರ್ವ ಶ್ರೀಲಂಕಾ ಆಟಗಾರ ದುಷ್ಮಂತ ಚಮೀರಾ ಸ್ಥಾನ ಪಡೆದಿದ್ದಾರೆ. ಹಾಗೆಯೇ ಫಿನ್ ಅಲೆನ್ ಬದಲಾಗಿ ಆಸ್ಟ್ರೇಲಿಯಾ ಮೂಲದ ಸಿಂಗಪೂರ್ ಕ್ರಿಕೆಟಿಗ ಟಿಮ್ ಡೇವಿಡ್ ಸ್ಥಾನ ಪಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top