fbpx
ಸಮಾಚಾರ

ಅಂಬರೀಶ್ ಧೋನಿಗೆ 2 ಲಕ್ಷ ರೂ. ನೀಡಿದ್ದ ಕುತೂಹಲ ವಿಚಾರ ಹಂಚಿಕೊಂಡ ಸಂಸದೆ ಸುಮಲತಾ

ಸ್ಯಾಂಡಲ್‍ವುಡ್ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್‍ರವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿಗೆ ಹಣ ನೀಡಿದ್ದರು ಎಂಬ ವಿಚಾರವನ್ನು ಸುಮಲತಾ ಅಂಬರೀಶ್‍ರವರು ಬಹಿರಂಗ ಪಡಿಸಿದ್ದಾರೆ. ಹೀಗೆಂದು ಅವರ ಪತ್ನಿ ಸಂಸದೆ ಸುಮಲತಾ ಹೇಳಿಕೊಂಡಿದ್ದಾರೆ, ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.

 

 

ಹೌದು, 2014ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ವೇಳೆ ಉತ್ತಮ ಪ್ರದರ್ಶನ ತೋರಿದ್ದ ಧೋನಿ ಆಟ ನೋಡಿ ಅಂಬರೀಶ್ ಮನಸೋತಿದ್ದರು. ಜೊತೆಗೆ ಎಂ.ಎಸ್ ಡಿ ಕಷ್ಟವನ್ನು ತಿಳಿದು ಅವರಿಗೆ 2 ಲಕ್ಷ ರೂ. ಹಣ ಸಹಾಯ ಮಾಡಿದ್ದರು ಎಂಬ ಸತ್ಯ ಇದೀಗ ಬೆಳಕಿಗೆ ಬಂದಿದೆ.

”ಅಂಬರೀಶ್ ಅವರ ಮಾನವೀಯ ಕಾರ್ಯಗಳು ಹೆಚ್ಚಾಗಿ ತಿಳಿದಿಲ್ಲ. ಏಕಂದ್ರೆ, ಮಾಡಿದ ಕೆಲಸದ ಬಗ್ಗೆ ಅವರು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರಚಾರದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಇಂತಹ ಅನಿರೀಕ್ಷಿತ ಘಟನೆಗಳು ನನ್ನ ಗಮನಕ್ಕೆ ಬಂದಾಗ ನಿಜಕ್ಕೂ ಸರ್ಪ್ರೈಸ್ ಆಗುತ್ತದೆ. ಆದರೆ, ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅದಕ್ಕೆ ಅವರನ್ನು ಜನರು ಪ್ರೀತಿಯಿಂದ ದಾನ ಕರ್ಣ ಎಂದು ಕರೆಯುವುದು” ಎಂದು ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top