fbpx
ಸಮಾಚಾರ

ಕಿಚ್ಚನ ಹುಟ್ಟುಹಬ್ಬ ಆಚರಣೆಗೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಅನಿಲ್ ಕುಂಬ್ಳೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನೂ 10 ದಿನ ಬಾಕಿ ಇದ್ದು, ಅವರ ಅಭಿಮಾನಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಈಗಲೇ ವಿಶೇಷ ಗಿಫ್ಟ್ ನೀಡುವ ಮೂಲಕ ಶುಭ ಕೋರಿದ್ದಾರೆ.

 

 

ಪ್ರತಿ ವರ್ಷ ಸುದೀಪ್​ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸ್ಪೆಷಲ್​ ಆಗಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷ ಅಭಿಮಾನಿಗಳು ಕಿಚ್ಚನಿಗೆ ವಿಶೇಷ DPಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡುವ ಪ್ಲಾನ್​ ಮಾಡಿಕೊಂಡಿದ್ದರು. ಕಿಚ್ಚನ ಅಭಿಮಾನಿಗಳು ಸಿದ್ದಪಡಿಸಿದ್ದ ಆ ವಿಶೇಷ DPಅನ್ನು ಅನಿಲ್ ಕುಂಬ್ಳೆ ಅವರಿಂದ ಬಿಡುಗಡೆ ಮಾಡಬೇಕು ಎಂದು ಬಯಸಿದ್ದರು. ಈ ವಿಚಾರವಾಗಿ ಅನಿಲ್ ಕುಂಬ್ಳೆ ಅವರ ಬಳಿ ಮನವಿ ಮಾಡಿಕೊಂಡು ಅವರ ಮೂಲಕ ನೂತನ DPಯನ್ನು ಬಿಡುಗಡೆ ಮಾಡಿಸಿದ್ದಾರೆ. ಆ ಮೂಲಕ ಸುದೀಪ್​ ಹುಟ್ಟುಹಬ್ಬಕ್ಕೆ ಕುಂಬ್ಳೆ ಹಾಗೂ ಕಿಚ್ಚನ ಅಭಿಮಾನಿಗಳು ಅಡ್ವಾನ್ಸ್​ ವಿಶ್​ ಮಾಡಿದ್ದಾರೆ.

ಸಿಡಿಪಿ ಬಿಡುಗಡೆ ಮಾಡಿರುವ ಕುರಿತು ಸ್ವತಃ ಅನಿಲ್ ಕುಂಬ್ಳೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಆತ್ಮೀಯ ಸ್ನೇಹಿತ ಮತ್ತು ಪ್ರಸಿದ್ಧ ನಟ ಶ್ರೀ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾಮನ್ ಡಿಸ್ಪ್ಲೇ ಪಿಚ್ಚರ್ ಅನ್ನು ನಾನು ರಿಲೀಸ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಸುದೀಪ್ ಅವರೇ ಹೀಗೆ ಯಾವಾಗಲೂ ಸ್ಪೂರ್ದಿದಾಯಕವಾಗಿರಿ” ಎಂದು ಅನಿಲ್ ಕುಂಬ್ಳೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top