fbpx
ಸಮಾಚಾರ

ಆರ್​ಸಿಬಿಗೆ ಬಂತು ಆನೆ ಬಲ! ಗೂಗ್ಲಿ ಸ್ಪಿನ್ನರ್ ಹಸರಂಗ ತಂಡಕ್ಕೆ ಸೇರ್ಪಡೆ

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನ್ನಿಳಿದ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಭಾಗ-2 ಪಂದ್ಯಾವಳಿಗಳು ಯುಎಇನಲ್ಲಿ ಆರಂಭವಾಗಲಿದ್ದು, ಈಗಿನಿಂದಲೇ ಐಪಿಎಲ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಹೀಗಿರುವಾಗಲೇ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಆನೆ ಬಲ ಬಂದಿದೆ.

 

 

ಹೌದು, ಆರ್​ಸಿಬಿ ತಂಡಕ್ಕೆ ಶ್ರೀಲಂಕಾದ ಗೂಗ್ಲಿ ಸ್ಪಿನ್ನರ್ ವಸುಂದು ಹಸರಂಗ ಸೇರ್ಪಡೆಗೊಂಡಿದ್ದಾರೆ. ಈ ಮಾಹಿತಿಯನ್ನು ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದೆ

ಇತ್ತೀಚೆಗೆ, ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ಟಿ 20 ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಭಾರತದ ಸೋಲಿಗೆ ಒಂದು ದೊಡ್ಡ ಕಾರಣವೆಂದರೆ ಆತಿಥೇಯ ತಂಡದ ವನಿದು ಹಸರಂಗ. ಅವರ ಅದ್ಭುತ ಬೌಲಿಂಗ್ ಲಂಕಾ ಪಾಳಯಕ್ಕೆ ನೆರವಾಗಿತ್ತು. ಇಂಥಾ ಶ್ರೇಷ್ಠ ಆಟಗಾರ ಆರ್ಸಿಬಿ ಸೇರಿರುವುದು ಆರ್ಸಿಬಿ ಅಭಿಮಾನಿಗಳಲ್ಲಿ ಖುಷಿ ತಂದಿದೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top