fbpx
ಸಮಾಚಾರ

ದುಡ್ಡಿಲ್ಲದಾಗ ರವಿಚಂದ್ರನ್​ ಬಳಿ 200 ರೂಪಾಯಿ ಕೇಳಿದ್ದ ಜಗ್ಗೇಶ್, ರವಿಮಾಮ ಮಾಡಿದ್ದೇನು: ಜಗ್ಗೇಶ್ ಭಾವುಕ

ಗುರುವಾರ ಜಗ್ಗೇಶ್ ನಟನೆಯ ‘ರಂಗನಾಯಕ’ ಸಿನಿಮಾದ ಪ್ರೆಸ್‌ಮೀಟ್ ಇತ್ತು. ಈ ವೇಳೆ ಜಗ್ಗೇಶ್‌ ಒಂದಷ್ಟು ಹಳೆಯ ವಿಚಾರಗಳನ್ನು ಹಂಚಿಕೊಂಡರು. ಆಗಿನ ಕಾಲದಲ್ಲಿ ಚಿತ್ರರಂಗದಲ್ಲಿ ಯಾವ ರೀತಿಯ ಹೊಂದಾಣಿಕೆ ಇತ್ತು. ಕಲಾವಿದರು, ಯಾವ ರೀತಿ ಮತ್ತೊಬ್ಬ ಕಲಾವಿದರಿಗೆ ಸಹಾಯ ಮಾಡುತ್ತಿದ್ದರು ಅನ್ನೋದನ್ನು ಜಗ್ಗೇಶ್ ಹೇಳಿಕೊಂಡಿದ್ದಾರೆ.

ಗಣೇಶ ಹಬ್ಬ ಬಂದಿತ್ತು. ಮನೆಯಲ್ಲಿ ಹಣ ಇದೆಯೇ ಎಂದು ಹೆಂಡತಿ ಕೇಳಿದೆ. ಹೆಂಡತಿ ಇಲ್ಲ ಎಂದಳು. ಈ ವೇಳೆ 200 ರೂಪಾಯಿ ಕೊಡಿ ಎಂದು ರವಿಚಂದ್ರನ್​ಗೆ ಕೇಳಿದೆ. ಆಗ ಅವರು ಐದುನೂರು ಕೊಟ್ಟರು’ ಎಂದು ಹಳೆಯ ದಿನಗಳನ್ನು ಅವರು ನೆನೆದಿದ್ದಾರೆ.

ಹೀಗೆ ಆಗಿನ ಕಾಲದ ನಟರು ಮನೆಯ ಬಗ್ಗೆ, ಮಕ್ಕಳ ಬಗ್ಗೆ ಕೇಳ್ತಿದ್ರೂ. ಏನಾದ್ರೂ ಹಣದ ಸಮಸ್ಯೆ ಅಂದ್ರೆ ನಿರ್ಮಾಪಕರಿಗೆ ಹೇಳಿ ಸ್ವಲ್ಪ ಹಣ ಕೊಡುವಂತೆ ಪ್ರೀತಿಯಿಂದ ಹೇಳ್ತಿದ್ರೂ. ಈ ವಿಚಾರದಲ್ಲಿ ಪ್ರಭಾಕರ್​ ಮತ್ತು ಅಂಬರೀಶ್​ ಅವರು ತುಂಬ ನೆನಪಾಗ್ತಾರೆ ಎಂದು ಜಗ್ಗೇಶ್​ ತಮ್ಮ ಹಿಂದಿನ ದಿನಗಳನ್ನ ಹಂಚಿಕೊಂಡಿದ್ದಾರೆ.

ಅಂದಹಾಗೆ ಜಗ್ಗೇಶ್ ಅವರು ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತ ಹೀರೋ ಆದವರು. ಅವರು ರವಿಚಂದ್ರನ್ ಅವರ ರಣಧೀರ ಹಾಗು ಯುದ್ಧಕಾಂಡ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ನಟಿಸಿದ್ದಾರೆ. ರವಿಚಂದ್ರನ್ ಹಾಗೂ ಜಗ್ಗೇಶ್ ಅವರದು ಹಳೆಯ ಸ್ನೇಹ. ಅದು ಇಂದಿಗೂ ಹಾಗೆ ನಡೆದುಕೊಂಡು ಬಂದಿದೆ. ಈ ಹಿಂದೆಯು ಸಾಕಷ್ಟು ಭಾರಿ ರವಿಮಾಮನ ಹೃದಯ ವೈಶಾಲ್ಯತೆ ಬಗ್ಗೆ ಜಗ್ಗೇಶ್ ಅವರು ನುಡಿದಿದ್ದುಂಟು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top