fbpx
ಸಮಾಚಾರ

“ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿ” ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಟೀಕೆ

ಇಂಗ್ಲೆಂಡ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ನಿಕ್ ಕಾಂಪ್ಟನ್, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ನಡುವಿನ ಸ್ಲೆಡ್ಜಿಂಗ್‌ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಯನ್ನು’ಅತ್ಯಂತ ಕೆಟ್ಟ ನಾಲಿಗೆಯ ವ್ಯಕ್ತಿ’ ಎಂದು ಉಲ್ಲೇಖಿಸಿದ್ದಾರೆ.

ಕೊಹ್ಲಿ ಸ್ಲೆಡ್ಜಿಂಗ್ ವೇಳೆ ಮಿತಿ ಮೀರುತ್ತಾರೆ. ಬದಲಿಗೆ ಕೊಹ್ಲಿ ಸ್ವಲ್ಪ ತಾಳ್ಮೆ ತಂದುಕೊಳ್ಳಬೇಕು. ಯಾಕೆಂದರೆ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಒಂದು ಘನತೆಯಿದೆ. ಅದನ್ನು ಕೊಹ್ಲಿ ಉಳಿಸಿಕೊಳ್ಳಬೇಕು. ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್‌ ಒಳ್ಳೆಯದೆ. ಅದು ಬೇಕು ಕೂಡ. ಆದರೆ ನಮ್ಮ ನಾಲಗೆ ಎಲ್ಲೆ ಮೀರಬಾರದು. ಸ್ವಲ್ಪ ಶಾಂತವಾಗೆ ತಮ್ಮ ಪ್ರತಿರೋಧ ತೋರಿಸಿಕೊಳ್ಳಬೇಕು ಎಂದು ಕಾಂಪ್ಟನ್ ಹೇಳಿದ್ದಾರೆ.

ಕೊಹ್ಲಿ ಅತ್ಯಂತ ಕೆಟ್ಟ ನಾಲಿಗೆ ವ್ಯಕ್ತಿಯಲ್ಲವೇ? 2012 ರಲ್ಲಿ ನಾನು ಕೂಡ ಕೊಹ್ಲಿಯಿಂದ ನಿಂದನೆಯನ್ನು ಎದುರಿಸಿದ್ದೆ. ಅದನ್ನು ನಾನು ಎಂದಿಗೂ ಮರೆಯಲಾರೆ. ಏಕೆಂದರೆ ಆಗ ವಿರಾಟ್ ಎಲ್ಲ ಮಿತಿಗಳನ್ನು ಮೀರಿದ್ದ. ಇದು ನನ್ನನ್ನು ದಿಗ್ಭ್ರಮೆಗೊಳಿಸಿತು. ಕೊಹ್ಲಿ ನಡುವಳಿಕೆಯು ಯಾವ ಮಟ್ಟದ ನಾಯಕತ್ವ ಹೊಂದಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಅವರ ನಡುವಳಿಕೆಯನ್ನು ನೀವು ಗಮನಿಸಬಹುದು ಎಂದು ನಿಕ್ ಕಾಂಪ್ಟನ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top