fbpx
ಸಮಾಚಾರ

‘ಕರೆಯದೆ ಬಂದ ಅತಿಥಿಯನ್ನು ಹೊರದಬ್ಬಲು ಹೋರಾಡುತ್ತಿದ್ದೇನೆ’ ಅನಾರೋಗ್ಯಕ್ಕೆ ತುತ್ತಾದ ನಿರ್ದೇಶಕ ಪವನ್ ಕುಮಾರ್

ಸ್ಯಾಂಡಲ್‌ವುಡ್‌ನ ನಿರ್ದೇಶಕ ಪವನ್ ಕುಮಾರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ‘ಲೂಸಿಯಾ’, ‘ಯೂ ಟರ್ನ್’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪವನ್ ಕುಮಾರ್ ಸದ್ಯ ‘ದ್ವಿತ್ವ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದ್ದರು. ಹೀಗಿರುವಾಗಲೇ, ಅವರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ.

ಹೌದು.. ನಿರ್ದೇಶಕ ಪವನ್​ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ವಿಷಯವನ್ನು ಸ್ವತಃ ಪವನ್​ ಅವರೇ ಖಚಿತ ಪಡಿಸಿದ್ದಾರೆ. ಅಲ್ಲದೇ ಅವರ ಶ್ವಾಸ ಕೋಶದ ಫೋಟೋ ಶೇರ್​ ಮಾಡಿ, ಆದಷ್ಟು ಬೇಗ ರಿಕವರಿ ಆಗಿಬರುವುದಾಗಿ ವಿಶ್ವಾಸದಿಂದಲೇ ಹೇಳಿಕೊಂಡಿದ್ದಾರೆ. ಜೊತೆಗೆ ಕೊರೊನಾ ಗೆದ್ದು ಎದ್ದು ಬನ್ನಿ ಎಂದು ಪವನ್​ಗೆ ಅವರ​ ಹಿತೈಶಿಗಳು ಹಾರೈಸಿದ್ದಾರೆ.

 

 

ನನ್ನ ಸುಂದರ ಶ್ವಾಸಕೋಶದ ಚಿತ್ರವಿದು. ಈಗ ನನ್ನ ಶ್ವಾಸಕೋಶಕ್ಕೆ ಆಹ್ವಾನಿಸದೆ ಬಂದ ಅತಿಥಿ ಸೇರಿಕೊಂಡುಬಿಟ್ಟಿದೆ. ಕರೆಯದೆ ಬಂದ ಈ ಅತಿಥಿಯನ್ನು ಹೊರಗೆ ಹಾಕಲು ನಾನು ಮತ್ತು ನನ್ನ ಶ್ವಾಸಕೋಶ ಹೋರಾಡುತ್ತಿದ್ದೇವೆ. ಈ ಯುದ್ಧಕ್ಕೆ 14 ದಿನಗಳಲ್ಲಿ ತೆರೆಬೀಳಲಿದೆ. ಇದರ ಹೊರತಾಗಿ ನಾನು ಆರಾಮಾಗಿದ್ದೇನೆ. ರೂಮ್‌ನಲ್ಲಿ ಲಾಕ್‌ ಆಗಿದ್ದೇನೆ. ಬಹುತೇಕ ಕಾಲ ನಿದ್ರಿಸುತ್ತಿದ್ದೇನೆ. ನನ್ನನ್ನ ನನ್ನ ಪತ್ನಿ ಸೌಮ್ಯ ಆರೈಕೆ ಮಾಡುತ್ತಿದ್ದಾರೆ” ಎಂದು ಪವನ್ ಕುಮಾರ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top