fbpx
ಸಮಾಚಾರ

‘ಕೃಷ್ಣ ಮೆಚ್ಚಿದ ರಾಧೆ’ ಖ್ಯಾತಿಯ ನಟಿ ಚಿತ್ರಾ ವಿ’ಧಿವಶ

ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಚಿತ್ರಾ (56) ಅವರು ಸಾವನ್ನಪ್ಪಿದ್ದಾರೆಂದು ಶನಿವಾರ ತಿಳಿದುಬಂದಿದೆ. ಹೃದಯಾಘಾತದಿಂದ ಚಿತ್ರಾ ಅವರು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆಂದು ವರದಿಗಳು ತಿಳಿಸಿವೆ. ಚಿತ್ರಾ ಅವರು ಪತಿ ವಿಜಯರಾಘವನ್ ಪುತ್ರಿ ಮಹಾಲಕ್ಷ್ಮಿ ಅವರನ್ನು ಅಗಲಿದ್ದಾರೆ.

100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ಕಲಾವಿದೆ ಚಿತ್ರಾ ಅವರಿಗೆ 56 ವರ್ಷ ವಯಸ್ಸಾಗಿತ್ತು. ಚೆನ್ನೈನ ಸಾಲಿಗ್ರಾಮಂನಲ್ಲಿ ಅವರು ವಾಸಿಸುತ್ತಿದ್ದರು. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಲಿದೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಚಿತ್ರಾ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಯಲ್ಲಿಯೂ ಚಿತ್ರಾ ನಟಿಸಿದ್ದಾರೆ. ಸುಮಾರು 100 ಸಿನಿಮಾಗಳಲ್ಲಿ ಚಿತ್ರ ಬಣ್ಣ ಹಚ್ಚಿದ್ದು, ಮೋಹನ್‌ಲಾಲ್, ಪ್ರೇಮ್ ನಾಜೀರ್ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ಕನ್ನಡಲದಲ್ಲಿ ‘ಸುಂದರ ಸ್ವಪ್ನಗಳು’, ‘ಕೃಷ್ಣ ಮೆಚ್ಚಿದ ರಾಧೆ’, ‘ಅಜಯ್ ವಿಜಯ್’ ಸಿನಿಮಾದಲ್ಲಿ ಚಿತ್ರಾ ಕಾಣಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top