fbpx
ಸಮಾಚಾರ

ಖ್ಯಾತ ನಟ ಅಭಿಷೇಕ್ ಬಚ್ಚನ್​ ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಕೈಗೆ ಪೆಟ್ಟು ಮಾಡಿಕೊಂಡಿರುವ ನಟ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು, ಆಸ್ಪತ್ರೆಯ ಮುಂಭಾಗದಲ್ಲಿ ಕ್ಯಾಮರಾ ಕಣ್ಣುಗಳಿಗೆ ಅಮಿತಾಬ್ ಬಚ್ಚನ್ ಮತ್ತು ಪುತ್ರಿ ಶ್ವೇತಾ ಬಚ್ಚನ್ ನಂದಾ ಸೆರೆ ಸಿಕ್ಕಿದ್ದಾರೆ.

ಸದ್ಯ ಈ ಕುರಿತಂತೆ ಲೀಲಾವತಿ ಆಸ್ಪತ್ರೆಯ ಸಿಇಒ ಅವರು, ಅಭಿಷೇಕ್‍ರವರ ಕೈಗೆ ಸಣ್ಣ ಪೆಟ್ಟಾಗಿದ್ದು, ಕೈ ಸಂಬಂಧಿಸಿದ ನೋವಿನಿಂದ ಅವರು ಭಾನುವಾರ ಆಸ್ಪತ್ರೆಗೆ ಬಂದಿದ್ದರು. ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಈಗಾಗಲೇ ಮನೆಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಷೇಕ್‌ ಅವರನ್ನು ತಂದೆ ಅಮಿತಾಬ್‌ ಬಚ್ಚನ್‌ ಹಾಗೂ ಸಹೋದರಿ ಶ್ವೇತಾ ಬಚ್ಚನ್‌ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಅಭಿಷೇಕ್ ಬಚ್ಚನ್‌ ಒಟಿಟಿ ವೇದಿಕೆಗಾಗಿ ‘ಲೂಡೋ’ ಮತ್ತು ‘ದಿ ಬಿಗ್ ಬುಲ್’ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದ ಬಳಿಕ, ಇದೀಗ ‘ಬಾಬ್ ಬಿಸ್ವಾಸ್’ ಮತ್ತು ‘ದಾಸ್ವಿ’ ಚಿತ್ರಗಳ ಶೂಟಿಂಗ್‌ನಲ್ಲಿ ತೊಡಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top