fbpx
ಸಮಾಚಾರ

ಡ್ರ’ಗ್ಸ್ ಪ್ರಕರಣ: ಸಂಜನಾ, ರಾಗಿಣಿಗೆ ಮತ್ತೆ ಸಂಕಷ್ಟ

 ಮಾದಕ ವಸ್ತು ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಮತ್ತೆ ಸಂಕಷ್ಟ ಎದುರಾಗಿದೆ. ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರು ನಟಿಯರು ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿರುವ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು.

ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top