fbpx
ಮನೋರಂಜನೆ

ನಟಿ ಸಂಜನಾ ಆಸ್ಪತ್ರೆಗೆ ದಾಖಲು: ಮಗಳ ಆರೋಗ್ಯದ ಬಗ್ಗೆ ತಾಯಿ ಹೇಳಿದ್ದೇನು ಗೊತ್ತಾ?

ಅಂತರರಾಷ್ಟ್ರೀಯ ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ‘ಕೂದಲು ಪರೀಕ್ಷೆ’ಯಿಂದ ದೃಢಪಟ್ಟಿರುವ ಬೆನ್ನಲ್ಲೇ, ನಟಿ ಸಂಜನಾ ಗಲ್ರಾನಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೌದು. ಮಗಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಈ ಹಿಂದೆ ಸಂಜನಾಗೆ ಸರ್ಜರಿ ಆಗಿತ್ತು. ಹೀಗಾಗಿ ರಾತ್ರಿಯೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಮೆಂಟಲಿ ಅಪ್ ಸೆಟ್ ಆಗಿದ್ದಾರೆ ಎಂದು ನಟಿ ಸಂಜನಾ ತಾಯಿ ರೇಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಆಕೆ ಈ ಕೇಸ್ ನಿಂದ ಡಿಸ್ಟರ್ಬ್ ಆಗಿದ್ದಾಳೆ. ಪದೇ ಪದೇ ಇದೇ ಕೇಸ್ ಬಗ್ಗೆ ಕೇಳಿ ಡಿಪ್ರೆಶನ್ ಗೆ ಹೋಗಿದ್ದಾಳೆ. ಹುಷಾರಿಲ್ಲದ ಕಾರಣ ಆಕೆಯನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ನನ್ನ ಮಗಳು ಏನೂ ತಪ್ಪು ಮಾಡಿಲ್ಲ. ಆದರೆ ದುರಾದೃಷ್ಟದಿಂದ ಈತರ ಎಲ್ಲಾ ಆಗ್ತಿದೆ. ನಾವು ಭಗವಾನ್ ನನ್ನ ನಂಬ್ತೀವಿ. ದೇವರ ದಯೆಯಿಂದ ನಾಲ್ಕು ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂದರು. 

ತಮ್ಮ ಫೌಂಡೇಶನ್ ಮುಖಾಂತರ ಅಗತ್ಯವಿರುವವರಿಗೆ ಸ್ವತಃ ಆಹಾರ ಹಂಚುತ್ತಿದ್ದ ಸಂಜನಾ, ಊಟ ಕೊಡಲು ಬರದೇ ಗೈರಾದ ಕುರಿತು ರೇಷ್ಮಾ ಪ್ರತಿಕ್ರಿಯಿಸಿದ್ದಾರೆ. ‘‘ಎಲ್ಲವೂ ಹಣೆಬರಹ, ದೇವರಿದ್ದಾರೆ, ನಾವೇನೂ ತಪ್ಪು ಮಾಡಿಲ್ಲ. ಸಂಜನಾಗೆ ಹುಷಾರಿಲ್ಲ ಹಾಗಾಗಿ ಊಟ ನೀಡಲು ಬಂದಿಲ್ಲ. ಇಲ್ಲವೆಂದಾದರೆ ಸಂಜನಾ ಅವರೇ ಬಂದು ಊಟ ಕೊಡುತ್ತಿದ್ದರು. ಪದೇಪದೆ ಅದೇ ಮಾತು ಕೇಳಿ ಬರ್ತಿದ್ರೆ ಬೇಜಾರಾಗುತ್ತದೆ. ಹಳೆಯ ಘಟನೆಗಳನ್ನು ಮರೆತು ಬದುಕಬೇಕು ಎಂದುಕೊಂಡಿದ್ದಾರೆ. ಗ್ರಹಚಾರಾನೋ ಏನೋ ಗೊತ್ತಿಲ್ಲ, ಮತ್ತೆ ಅದೇ ಬರ್ತಿದೆ’’ ಎಂದು ಭಾವುಕರಾಗಿ ನುಡಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top