fbpx
ಸಮಾಚಾರ

ಆಗಸ್ಟ್ 28: ನಾಳೆಯ ಪಂಚಾಂಗ ಮತ್ತು ದಿನ ರಾಶಿ ಭವಿಷ್ಯ

ಆಗಸ್ಟ್ 28, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಷಷ್ಠೀ 8:56 pm
ನಕ್ಷತ್ರ : ಭರಣಿ 3:35 am
ಯೋಗ : ಧ್ರುವ Full Night
ಕರಣ : ಗರಿಜ 7:48 am ವಾಣಿಜ 8:56 pm

Time to be Avoided
ರಾಹುಕಾಲ : 9:16 am – 10:48 am
ಯಮಗಂಡ : 1:52 pm – 3:25 pm
ದುರ್ಮುಹುರ್ತ : 6:11 am – 7:01 am, 7:01 am – 7:50 am
ವಿಷ : 11:30 am – 1:17 pm
ಗುಳಿಕ : 6:11 am – 7:44 am

Good Time to be Used
ಅಮೃತಕಾಲ : 10:13 pm – 12:00 am
ಅಭಿಜಿತ್ : 11:56 am – 12:45 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:33 pm
ರವಿರಾಶಿ : ಸಿಂಹ
ಚಂದ್ರರಾಶಿ : ಮೇಷ

 

 

 

ಜನರು ನಿಮ್ಮ ಬಗ್ಗೆ ಇಲ್ಲಸಲ್ಲದ ಅಪವಾದ ಮಾಡುವ ಸಾಧ್ಯತೆ. ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಜಾಂಶ ಗೊತ್ತಾದ ನಂತರ ಅವರೇ ಸುಮ್ಮನಾಗುವರು. ದೈವ ಕೃಪೆಯಿಂದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಕಷ್ಟದಲ್ಲಿರುವ ನಿಮ್ಮ ಸಂಬಂಧಿಕರಿಗೆ ಅಥವಾ ಮಗಳಿಗೆ ಧನಸಹಾಯ ಮಾಡುವಿರಿ ಅಥವಾ ಅವರು ನಿರಾಶರಾಗದಂತೆ ಒಳ್ಳೆಯ ಮಾತುಗಳಿಂದ ಅವರಿಗೆ ಧೈರ್ಯ ತುಂಬುವಿರಿ. ಕಷ್ಟದಲ್ಲಿರುವಾಗ ಸಹಾಯ ಮಾಡುವವನೇ ನಿಜವಾದ ಬಂಧು. .

ನಿಮಗೆ ಬರುವ ಸಲಹೆ ಸಹಕಾರಗಳನ್ನು ಸ್ವೀಕರಿಸಿ. ಆದರೆ ಪ್ರತ್ಯುತ್ತರವಾಗಿ ನೀವು ನಿಮ್ಮ ವಿಚಾರಧಾರೆಗಳನ್ನು ಹರಿಯಬಿಡದಿರಿ. ಕೆಲವೊಮ್ಮೆ ಇದರಿಂದ ಅಪಾರ್ಥಕ್ಕೆ ಎಡೆಮಾಡಿಕೊಡುವ ಸಂಧರ್ಭವಿರುತ್ತದೆ.

ಪರೋಪಕಾರಿಗಳಾದ ನೀವು ಇಂದು ಇತರರಿಗೆ ಸಹಾಯ ಮಾಡಿ ಅವರಿಂದಲೇ ಟೀಕೆಗೆ ಗುರಿಯಾಗುವ ಸಂದರ್ಭವಿದೆ. ಹಾಗಾಗಿ ಯಾರೂ ಕೇಳದೆ, ಬಯಸದೆ ಅವರಿಗೆ ಸಹಾಯ ಮಾಡದಿರಿ.

 

ಆರಂಭಿಸಿದ ಕೆಲಸ ಕಾರ್ಯಗಳಿಗೆ ಸ್ನೇಹಿತರ ಬೆಂಬಲ ದೊರೆಯುವುದು. ಅಂತೆಯೇ ಅಧಿಕ ಖರ್ಚಿಗೆ ದಾರಿಯಾಗುವುದು. ಸಮಾಧಾನದಿಂದ ನಿರ್ಧಾರ ಕೈಗೊಳ್ಳಿ. ಕೆಲಸ ಕಾರ್ಯದಲ್ಲಿ ಯಶಸ್ಸು ಹೊಂದುವಿರಿ. ಕುಲದೇವತಾ ಪ್ರಾರ್ಥನೆ ಮಾಡಿ.

 

ಹಮ್ಮಿಕೊಂಡ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವವು. ಕುಲದೇವರ ಆರಾಧನೆಯಿಂದ ಒಳಿತಾಗುವುದು. ವಿನಯಶಾಲಿಯೇ ವಿಜಯಶಾಲಿ ಎಂಬಂತೆ ಇಂದು ಆದಷ್ಟು ತಾಳ್ಮೆಯಿಂದ ವ್ಯವಹರಿಸಿ.

 

ವೃತ್ತಿಯಲ್ಲಿ ಅಲ್ಪಶ್ರಮದಿಂದ ದೊಡ್ಡ ಹೆಸರು ಪಡೆಯುವಿರಿ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಪ್ರಯಾಣ ಕಾಲದಲ್ಲಿ ಎಚ್ಚರ. ಮುಂಬರುವ ದಿನಗಳಲ್ಲಿ ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು.

 

ಮನಸ್ತಾಪಗಳಿಗೆ ಒಳಗಾಗದಿರಿ. ಶಾಂತ ಮನಸ್ಸಿನಿಂದ ಕಾರ್ಯದಲ್ಲಿ ತೊಡಗಿರಿ. ನಿಮ್ಮ ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡುವುದರಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ಕೀರ್ತಿಯನ್ನು ಹಿಂಬಾಲಿಸಿ ಹಣವೂ ಬರುವುದು.

 

ಮನೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಗುರುವಿನ ಆಶೀರ್ವಾದದ ಅವಶ್ಯಕತೆಯಿದೆ. ಅವರ ಆಶೀರ್ವಾದದಿಂದ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವವು. ಆರ್ಥಿಕ ಸ್ಥಿತಿ ಸಾಮಾನ್ಯವಾಗಿದೆ.

ಅಪಮಾನ ಮಾಡುವ ಜನರನ್ನು ಅಸಮಾಧಾನ ತೋರದೆ ಉಪೇಕ್ಷಿಸಿ. ಧೈರ್ಯಂ ಸರ್ವತ್ರ ಸಾಧನಂ. ಅಪಮಾನವಾದರೆ ಒಳ್ಳೆಯದು ಎಂದು ದಾಸರು ಹಾಡಿದ್ದಾರೆ. ಇದರಿಂದ ನಿಮಗೆ ಸತ್ಯದ ದಾರಿ ತಿಳಿಯುವುದು.

 

ತಾಳ್ಮೆಯೊಂದೇ ನಿಮ್ಮನ್ನು ರಕ್ಷಿಸುವ ವಜ್ರಾಯುಧ. ಸಹೋದರರ ಜತೆ ಮನಸ್ತಾಪ ಕಲಹಗಳು ಸಂಭವಿಸುವ ಸಂದರ್ಭವಿದೆ. ಆತ್ಮೀಯರ ಸಂಗಡ ಉತ್ತಮ ಬಾಂಧವ್ಯಇಟ್ಟುಕೊಂಡು ತಾಳ್ಮೆಯಿಂದ ವರ್ತಿಸಿ. ಶುಭವಾಗುವುದು. ಹು ತಾಳ್ಮೆಯಿಂದ ಇದ್ದಲ್ಲಿ ಅನುಕೂಲವಾಗುವುದು.

 

ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಹಾನಿಯನ್ನುಂಟು ಮಾಡುವುದು. ತಕ್ಕದಾದ ನಿಲುವಿನೊಂದಿಗೆ ಮುಂದಾಗಿರಿ. ಇದರಿಂದ ಒಳಿತಾಗುವುದು ಮತ್ತು ನೆರೆಹೊರೆಯವರ ಪ್ರೀತಿಗೆ ಪಾತ್ರರಾಗುವಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top