fbpx
ಸಮಾಚಾರ

ಅಮ್ಮನಾಗ್ತಿದ್ದಾರಾ ದೀಪಿಕಾ ? ರಣವೀರ್ ಸಿಂಗ್ ಅಪ್ಪನಾದ್ರಾ ?

ಬಾಲಿವುಡ್‍ನಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕುರಿತು ಗಾಸಿಪ್‍ಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಆದರೆ ಈ ಬಾರಿ ದೀಪ್‍ವೀರ್ ದಂಪತಿ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಸುದ್ದಿಯಾಗಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ದೀಪ್‍ವೀರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

 

 

ರಣವೀರ್ ತಂದೆಯಾಗಿದ್ದಾರಾ?
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಪರಿಣಿತಿ ಚೋಪ್ರಾ ಅವರು ‘Ask Me Session’ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದರು. ಆ ವೇಳೆ ಕೆಲ ಪ್ರಶ್ನೆಗಳಿಗೆ ಅವರು ಹಾಸ್ಯಾತ್ಮಕವಾಗಿ ಉತ್ತರ ನೀಡಿದ್ದಾರೆ. ನಟ ರಣವೀರ್ ಸಿಂಗ್ ತಂದೆಯಾಗಿದ್ದಾರೆಯೇ ಎಂದು ಪರಿಣಿತಿಯನ್ನು ನೆಟ್ಟಿಗನೊಬ್ಬ ಪ್ರಶ್ನೆ ಮಾಡಿದ್ದಾನೆ. ಆ ಬಗ್ಗೆ ಮಾತನಾಡಿರುವ ಪರಿಣಿತಿ ದಯವಿಟ್ಟು ದೃಢಪಡಿಸಿ ಎಂದು ರಣವೀರ್‌ಗೆ ಹೇಳಿದ್ದಾರೆ. Ladies vs Ricky Bahl ಹಾಗೂ Kill Dil ಸಿನಿಮಾದಲ್ಲಿ ರಣವೀರ್, ಪರಿಣಿತಿ ಒಟ್ಟಾಗಿ ನಟಿಸಿದ್ದರು. ಹೀಗಾಗಿ ಪರಿಣಿತಿಗೆ ಅಭಿಮಾನಿಗಳು ಈ ಪ್ರಶ್ನೆ ಕೇಳಿದ್ದಾರೆ.

ಆರು ವರ್ಷಗಳ ಸಂಬಂಧದ ನಂತರ ರಣವೀರ್ 2018 ರಲ್ಲಿ ದೀಪಿಕಾ ಪಡುಕೋಣೆ ಅವರನ್ನು ವಿವಾಹವಾದರು. ಗೋಲಿಯೋನ್ ಕಿ ರಾಸ್ಲೀಲಾ: ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ನಂತಹ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇನ್ನೂ ಬಿಡುಗಡೆಯಾಗದ 83 ರಲ್ಲಿ ಅವರು ಜೋಡಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top