fbpx
ಸಮಾಚಾರ

ನಿಮ್ಮ ಅಜೆಂಡಾಗಳಿಗೆ ನನ್ನ ಹೇಳಿಕೆಯನ್ನು ಬಳಸಬೇಡಿ; ಪಾಕ್ ಕ್ರೀಡಾಪಟು ಟೀಕೆಯ ವಿರುದ್ಧ ನೀರಜ್ ಚೋಪ್ರಾ ಕಿಡಿ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ನಡೆದ ಸಂದರ್ಭದಲ್ಲಿ ಪಾಕ್ ಅಥ್ಲೀಟ್‌ ಅರ್ಷದ್ ನದೀಮ್  ತಮ್ಮ ಜಾವೆಲಿನ್ ತೆಗೆದುಕೊಂಡಿದ್ದನ್ನು ಮತ್ತು ಅವರಿಂದ ತಾವು ಪಡೆದಿದ್ದನ್ನು ಭಾರತದ ನೀರಜ್ ಚೋಪ್ರಾ ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ನಡೆಯುತ್ತಿರುವ ವಾದ–ವಿವಾದಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

 ಜಾವಲಿನ್‌ ಥ್ರೋ ಫೈನಲ್‌ ವೇಳೆ ನೀರಜ್ ಎಸೆಯಬೇಕಿದ್ದ ಜಾವೆಲಿನ್‌ ಪಾಕಿಸ್ತಾನದ ಅಥ್ಲೀಟ್‌ ಆರ್ಶದ್ ನದೀಂ ಬಳಿಯಿತ್ತು, ಅದನ್ನು ಕೇಳಿ ಪಡೆದಿದ್ದಾಗಿ ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ನೀರಜ್ ತಿಳಿಸಿದ್ದರು. ನೀರಜ್‌ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು.

ಆದರೆ, ಇಂದು ಇದಕ್ಕೆ ಪ್ರತಿಕ್ರಿಯಿಸಿರುವ ನೀರಜ್, “ಕ್ರೀಡೆಯಲ್ಲಿ ಇದೊಂದು ಅತ್ಯಂತ ಸಹಜ ಪ್ರಕ್ರಿಯೆ. ನಾವೆಲ್ಲರೂ ಪ್ರೀತಿಯಿಂದ ಇರುತ್ತೇವೆ. ನಿಮ್ಮ ಕೊಳಕು ಅಜೆಂಡಾಗಳಿಗೆ ನಮ್ಮ ಹೆಸರು ಮತ್ತು ಹೇಳಿಕೆಯನ್ನು ಬಳಸದಿರಿ” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

“‘ಸ್ಪರ್ಧೆಯಲ್ಲಿ ಎಲ್ಲರ ಜಾವೆಲಿನ್‌ಗಳು (ಭರ್ಜಿ) ಒಂದೇ ಕಡೆ ಇರುತ್ತವೆ. ಅವುಗಳನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು.  ಅರ್ಷದ್‌ ನನ್ನ ಜಾವೆಲಿನ್ ಹಿಡಿದು ಥ್ರೋಗೆ ತಯಾರಿ ಮಾಡುತ್ತಿದ್ದರು. ಇದು ದೊಡ್ಡ ವಿಷಯವೇನಲ್ಲ. ಪಾಕಿಸ್ತಾನದ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ತಪ್ಪೇನೂ ಇಲ್ಲ. ಎಲ್ಲವೂ ನಿಯಮಗಳ ಪ್ರಕಾರವೇ ನಡೆದಿದೆ’ ಎಂದು ನೀರಜ್ ಹೇಳಿದ್ದಾರೆ.. ಕ್ರೀಡೆ ಎಲ್ಲರನ್ನೂ ಒಟ್ಟಾಗಿ ಸಾಗುವುದನ್ನು ಕಲಿಸುತ್ತದೆ. ನಾವೆಲ್ಲ ಜಾವೆಲಿನ್ ಥ್ರೋ ಪಟುಗಳು ಪ್ರೀತಿಯಿಂದ ಇರುತ್ತೇವೆ. ನಿಮ್ಮ ಮಾತುಗಳು ನಮಗೆ ಹಿಂಸೆಯಾಗದಿರಲಿ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top