fbpx
ಸಮಾಚಾರ

ಸೆಪ್ಟೆಂಬರ್‌ 2ರಂದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ದೊಡ್ಡ ಸರ್‌ಪ್ರೈಸ್

ಅನೂಪ್ ಭಂಡಾರಿ ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯಿರುವ ‘ವಿಕ್ರಾಂತ್ ರೋಣ’ ಚಿತ್ರದ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಅಪ್‌ಡೇಟ್ ಹೊರಬಿದ್ದಿದೆ. ಕಿಚ್ಚ ಸುದೀಪ್ ಅಭಿಮಾನಿಗಳಿಗೆ ‘ವಿಕ್ರಾಂತ್ ರೋಣ’ ಚಿತ್ರತಂಡ ಬಿಗ್ ಸರ್‌ಪ್ರೈಸ್ ನೀಡಲು ಮುಂದಾಗಿದೆ. ಬರುವ ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಸುದೀಪ್ ಅವರ ಜನ್ಮದಿನದಂದು ಕಿಚ್ಚನ ಅಭಿಮಾನಿಗಳಿಗಾಗಿ ‘ವಿಕ್ರಾಂತ್ ರೋಣ’ ಚಿತ್ರದ ಸಣ್ಣ ಝಲಕ್ ಬಿಡುಗಡೆಯಾಗಲಿದೆ.

 

 

ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ತಮ್ಮ 50ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಿಚ್ಚನ ಹುಟ್ಟುಹಬ್ಬದ ದಿನ ಸುದೀಪ್ ಅವರ ಮುಂದಿನ ಸಿನಿಮಾ ಅನ್ಸೌಮೆಂಟ್ ಆಗಲಿದೆ. ಕಿಚ್ಚ ಅಭಿನಯದ ಬಹುನೀರಿಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾದ ವಿಕ್ರಾಂತ್ ರೋಣ ಚಿತ್ರದ ಝಲಕ್ ಸೆಪ್ಟೆಂಬರ್ 2ರಂದು ಬಿಡುಗಡೆಯಾಗಲಿದೆ. ಈ ಕುರಿತಾಗಿ ಚಿತ್ರ ತಂಡ ಸೋಶಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದೆ.

ಸೆ. 2ರಂದು ಬೆಳಿಗ್ಗೆ 11.5ಕ್ಕೆ ಸುದೀಪ್​ ಹುಟ್ಟುಹಬ್ಬದ ಉಡುಗೊರೆಯಾಗಿ ವಿಕ್ರಾಂತ್ ರೋಣ ಚಿತ್ರದ ಗ್ಲಿಂಪ್ಸ್​ ದ ಡೆಡ್​ ಮ್ಯಾನ್ಸ್​ ಆ್ಯಂಥಮ್​ ರಿಲೀಸ್ ಆಗಲಿದೆ. ಈ ವಿಷಯವನ್ನು ಕೆಲವೇ ನಿಮಿಷಗಳ ಹಿಂದೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವಿಕ್ರಾಂತ್ ರೋಣ ಸಿನಿಮಾ ಎಲ್ಲ ಸರಿಯಾಗಿ ಇದ್ದಿದ್ದರೆ ಈಗಾಗಲೇ ರಿಲೀಸ್​ ಆಗಿರುತ್ತಿತ್ತು. ಆಗ. 19ರಂದು ವಿಶ್ವದಾದ್ಯಂತ ರಿಲೀಸ್​ ಆಗಲಿದೆ ಎಂದು ಪ್ರಕಟಿಸಲಾಗಿತ್ತು. ಕೊರೋನಾ ಲಾಕ್​ಡೌನ್​ನಿಂದಾಗಿ ಈ ದಿನಾಂಕವನ್ನು ಮುಂದೂಡಲಾಯಿತು. ಇನ್ನು ಈ ಸಿನಿಮಾದಲ್ಲಿ ವಿಶೇಷ ಪಾತ್ರ ಹಾಗೂ ಹಾಡಿನಲ್ಲಿ ಬಾಲಿವುಡ್​ ನಟಿ ಜಾಕ್ವೆಲಿನ್ ಸಹ ನಟಿಸಿದ್ದಾರೆ. ಇನ್ನು ಈ ಹಾಡಿನ ಪ್ರಚಾರಕ್ಕಾಗಿ ಸಖತ್​ ಫೋಟೋಶೂಟ್​ ಸಹ ಮಾಡಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top