fbpx
ಸಮಾಚಾರ

ದೊಡ್ಡಣ್ಣ ಐಸಿಯೂನಲ್ಲಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ: ವೈದ್ಯರ ಮಾಹಿತಿ

ಹಿರಿಯ ನಟ ದೊಡ್ಡಣ್ಣ ಅವರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಕೆಲವರಿಗೆ ಹೃದಯದ ಬಡಿತ ಕಡಿಮೆ ಇರುತ್ತದೆ. ಆದರೆ ಇದು ಹಾರ್ಟ್ ಅಟ್ಯಾಕ್ ಕಾಯಿಲೆ ಅಲ್ಲ. ಹೃದಯದ ಬಡಿತ ತುಂಬಾ ಕಡಿಮೆ ಆದಾಗ ಕೆಲವರಿಗೆ ತಲೆ ಸುತ್ತು, ಪ್ರಜ್ಞೆ ತಪ್ಪುವುದೆಲ್ಲ ಆಗುತ್ತದೆ. ಸದ್ಯ ದೊಡ್ಡಣ್ಣ ಅವರಿಗೆ ಪೇಸ್ ಮೇಕರ್ ಹಾಕಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಸದ್ಯ ಐಸಿಯೂ ನಲ್ಲಿ ದೊಡ್ಡಣ್ಣ ಅವ್ರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಹೇಳಿದರು.

ಅಂದಹಾಗೆ ಹೃದಯ ಬಡಿತ ಕಡಿಮೆಯಾಗಿ ಸುಸ್ತಿನಿಂದ ಬುಧವಾರ ಜಯದೇವ ಆಸ್ಪತ್ರೆಗೆ ದೊಡ್ಡಣ್ಣ ದಾಖಲಾಗಿದ್ದಾರೆ. ಶಾಶ್ವತ ಪೇಸ್ ಮೇಕರ್ ಅಳವಡಿಸುವ ಕಾರ್ಯ ನಡೆದಿದೆ. ಸದ್ಯ ನಟ ಐಸಿಯುನಲ್ಲಿದ್ದಾರೆ. ಈಗಷ್ಟೇ ವೈದ್ಯಕೀಯ ಪ್ರೊಸಿಜರ್ ಸಂಪೂರ್ಣವಾಗಿದ್ದು, ನಟ ಚಿಕಿತ್ಸೆಗೆ ಸ್ಪಂದಿಸಿದ್ದಾರೆ.

ಮೂರು ದಿನದ ಬಳಿಕ ದೊಡ್ಡಣ್ಣ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ತಿಳಿಸಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top