fbpx
ಸಮಾಚಾರ

ಕಿರುತೆರೆಯ ನಟ ಗೌರವ್ ದೀಕ್ಷಿತ್ ಬಂಧನ

ಬಾಲಿವುಡ್ ಮತ್ತು ಹಿಂದಿ ಕಿರುತೆರೆಯ ನಟ ಗೌರವ್ ದೀಕ್ಷಿತ್ ಬಂಧಿತರಾಗಿದ್ದಾರೆ. ನಟ ಗೌರವ್ ದೀಕ್ಷಿತ್‌ರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ. ನಟ ಗೌರವ್ ದೀಕ್ಷಿತ್ ಮನೆಯಲ್ಲಿ ಅಪಾರ ಪ್ರಮಾಣದ ಮಾದಕ ದ್ರವ್ಯ (ಎಂಡಿ ಮತ್ತು ಚರಸ್) ಪತ್ತೆಯಾಗಿತ್ತು.

ನಟ ಅಜಾಜ್ ಖಾನ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ ಎನ್‌ಸಿಬಿ ಅಧಿಕಾರಿಯು ಗೌರವ್ ದೀಕ್ಷಿತ್ ನನ್ನು ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಮಾದಕ ದ್ರವ್ಯ ಪ್ರಕರಣದಲ್ಲಿ ಅಜಾಜ್ ಖಾನ್ ಬಂಧನಕ್ಕೊಳಗಾದ ಒಂದು ತಿಂಗಳ ನಂತರ, ಎನ್‌ಸಿಬಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಗೌರವ್ ಮನೆಯಲ್ಲಿ ದೊಡ್ಡ ಪ್ರಮಾಣದ ನಿಷೇಧಿತ ಔಷಧಗಳನ್ನು ವಶಪಡಿಸಿಕೊಂಡಿದೆ.

ಅಂದಹಾಗೆ ಗೌರವ್ ತನ್ನ ಸ್ನೇಹಿತನೊಂದಿಗೆ ಆತನ ನಿವಾಸದಲ್ಲಿ ಪೊಲೀಸರನ್ನು ಕಂಡಾಗ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ಪೊಲೀಸರು ನಟನನ್ನು ಹುಡುಕುತ್ತಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top