fbpx
ಸಮಾಚಾರ

ಶೂಟಿಂಗ್‌ ನಲ್ಲಿ ಗಾಯಗೊಂಡ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾ, ವೆಬ್ ಸರಣಿಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಹಾಲಿವುಡ್ ಸಿನಿಮಾಗಳ ಶೂಟಿಂಗ್ ವೇಳೆ ನಟ-ನಟಿಯರು ಸೇರಿದಂತೆ ಸಿನಿಮಾ ಕಲಾವಿದರ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ನಟಿ ಪ್ರಿಯಾಂಕಾ ಚೋಪ್ರಾರಿಗೆ ಚಿತ್ರೀಕರಣದ ವೇಳೆ ಗಾಯಗಳಾಗಿವೆ. ಸ್ವತಃ ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅವರೇ ಹಂಚಿಕೊಂಡಿದ್ದಾರೆ.

ಶೂಟಿಂಗ್​ ಸಮಯದಲ್ಲಿ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸುತ್ತವೆ. ಕೆಲವೊಮ್ಮೆ ಪ್ರಾಣ ಹಾನಿಗಳು ಉಂಟಾದ ಉದಾಹರಣೆ ಕೂಡ ಇದೆ. ಅದೃಷ್ಟವಶಾತ್​ ಪ್ರಿಯಾಂಕಾಗೆ ಸಣ್ಣ ಗಾಯ ಮಾತ್ರವಾಗಿದೆ. ಈ ಬಗ್ಗೆ ಅವರು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಹಣೆ ರಕ್ತದಲ್ಲಿ ನೆನೆದಿರುವ ಫೋಟೋ ಹಾಕಿದ್ದಾರೆ ಪ್ರಿಯಾಂಕಾ ಚೋಪ್ರಾ. ಇದರ ಜತೆಗೆ ಹುಬ್ಬಿನ ಮೇಲೆ ಗಾಯ ಆಗಿದೆ. ಈ ಫೋಟೋಗೆ ಯಾವುದು ನಿಜ? ಯಾವುದು ನಿಜವಲ್ಲ? ಎಂದು ಪ್ರಿಯಾಂಕಾ ಪ್ರಶ್ನೆ ಮಾಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ನಿಜಕ್ಕೂ ಶಾಕ್​ಗೆ ಒಳಗಾಗಿದ್ದಾರೆ. ಪ್ರಿಯಾಂಕಾ ಹಣೆ ರಕ್ತದಲ್ಲಿ ನೆನೆದಿದೆ ಎನ್ನುವದನ್ನು ನೋಡಿದ ಅಭಿಮಾನಿಗಳು ಆತಂಕ ಹೊರ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top