fbpx
ಸಮಾಚಾರ

ಆಗಸ್ಟ್ 30: ಇಂದಿನ ಪಂಚಾಂಗ ಮತ್ತು ದಿನ ರಾಶಿ ಭವಿಷ್ಯ

ಆಗಸ್ಟ್ 30, 2021 ಸೋಮವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಷ್ಟಮೀ 1:59 am
ನಕ್ಷತ್ರ : ಕೃತಿಕೆ 6:39 am
ಯೋಗ : ವ್ಯಾಘಾತ 7:46 am
ಕರಣ : ಬಾಲವ 12:42 pm ಕುಲವ 1:59 am

Time to be Avoided
ರಾಹುಕಾಲ : 7:43 am – 9:16 am
ಯಮಗಂಡ : 10:48 am – 12:20 pm
ದುರ್ಮುಹುರ್ತ : 12:44 pm – 1:33 pm, 3:11 pm – 4:01 pm
ವಿಷ : 12:42 am – 2:30 am
ಗುಳಿಕ : 1:52 pm – 3:24 pm

Good Time to be Used
ಅಮೃತಕಾಲ : 6:07 am – 7:55 am
ಅಭಿಜಿತ್ : 11:55 am – 12:44 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:31 pm
ರವಿರಾಶಿ : ಸಿಂಹ
ಚಂದ್ರರಾಶಿ : ವೃಷಭ

 

 

 

ಅವಸರದಲ್ಲಿ ಹಮ್ಮಿಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಂದರ್ಭವಿದೆ. ಆರ್ಥಿಕ ಭರವಸೆ ಕೊಟ್ಟವರು ಹಣಕಾಸಿನ ಸಹಾಯ ಮಾಡಲು ಹಿಂಜರಿಯುವರು. ವ್ಯಾಪಾರದ ದೃಷ್ಟಿಯಿಂದ ಹಳೆಯ ವಾಹನ ಖರೀದಿ ಸೂಕ್ತವಲ್ಲ.

ಮತ್ತಾರನ್ನೋ ಸಂತೃಪ್ತಿ ಪಡಿಸಲು ಹೋಗಿ ನೀವು ಸಮಸ್ಯೆಯ ಸುಳಿಯಲ್ಲಿ ಸಿಲುಕದಿರಿ. ಕಾರ್ಯ ಒತ್ತಡ ತೀವ್ರವಾಗುವುದರಿಂದ ಅಪಾರ ತಾಳ್ಮೆ ಅತ್ಯವಶ್ಯಕ ಎಂಬುದನ್ನು ಮರೆಯದಿರಿ. ಮತ್ತೊಬ್ಬರ ಮೇಲೆ ಸಂಶಯ ಪಡುವುದನ್ನು ಬಿಡಿ.

ವೃತ್ತಿಯಲ್ಲಿ ಸ್ವಲ್ಪ ಪರಿಶ್ರಮ ಅಗತ್ಯ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿರಿ. ಪ್ರಯಾಣದಲ್ಲಿ ಎಚ್ಚರಿಕೆ. ಪ್ರಯಾಣ ಕಾಲದಲ್ಲಿ ನರಸಿಂಹ ದೇವರ ಪ್ರಾರ್ಥನೆ ಮಾಡಿರಿ.

ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಸದಾ ಹೊರಜಗತ್ತಿನ ಚಿಂತೆ ಮಾಡುವ ನೀವು ಇಂದು ಕೌಟುಂಬಿಕ ಸದಸ್ಯರ ಬೇಕು-ಬೇಡಗಳಿಗೆ ಸ್ಪಂದಿಸುವುದು ಉತ್ತಮ. ನಿಮ್ಮ ಒಳ್ಳೆಯ ಕಾರ್ಯಗಳಿಗೆ ಕುಟುಂಬ ಸದಸ್ಯರ ಬೆಂಬಲ ದೊರೆಯುವುದು.

 

ಆರೋಗ್ಯವೇ ಭಾಗ್ಯ. ಆರೋಗ್ಯದ ಕಡೆ ಅಲಕ್ಷ ್ಯ ಸಲ್ಲದು. ಬಂಧುಬಾಂಧವರ ಮತ್ತು ಹಿತೈಷಿಗಳ ಮಾತನ್ನು ಆಲಿಸಿರಿ. ಹಣವು ಬಂದ ವೇಗದಲ್ಲಿಯೇ ಖರ್ಚಾಗಿ ಹೋಗುವ ಸಂದರ್ಭವಿರುತ್ತದೆ. ಮಕ್ಕಳು ನಿಮ್ಮ ಮಾತಿಗೆ ಬೆಲೆ ಕೊಡದೆ ಹೋಗುವ ಸಂದರ್ಭ ಬರಬಹುದು.

 

ನೀವು ಹೆಚ್ಚು ಕ್ರಿಯಾಶೀಲರಾಗುವಿರಿ. ನಿಮ್ಮ ಪರಿಶ್ರಮದಿಂದ ಮುಗಿಯದ ಹಳೆಯ ಕೆಲಸಗಳು ಕೈಗೂಡುವುದು. ಮಾನಸಿಕ ನೆಮ್ಮದಿಯ ಜೊತೆಯಲ್ಲಿ ಸಾಮಾಜಿಕ ಮನ್ನಣೆಯೂ ದೊರೆಯುವುದು. ಆರ್ಥಿಕ ಭದ್ರತೆಗೆ ತೊಂದರೆ ಇಲ್ಲ.

 

ಆರೋಗ್ಯ ಸಮಸ್ಯೆಗಳು ಬಗೆಹರಿಯುವವು. ಉತ್ತಮ ತೀರ್ಮಾನ ಮತ್ತು ಕ್ಲಿಷ್ಟಕರ ಸನ್ನಿವೇಶಗಳನ್ನು ನೀವು ನಿಭಾಯಿಸುವಿರಿ. ಕಚೇರಿಯಲ್ಲಿಯೂ ನಿಮಗೆ ಒಳ್ಳೆಯ ಗೌರವ ಸಿಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುವುದು.

 

ಯಾವುದೇ ಕೆಲಸಕ್ಕೆ ಹೊರಡುವ ಮುನ್ನ ಇಷ್ಟದೇವರ ಪ್ರಾರ್ಥನೆ ಮಾಡುವುದನ್ನು ಮರೆಯಬೇಡಿ. ಆರ್ಥಿಕ ವಿಚಾರದಲ್ಲಿ ನಿಮಗೆ ಧಾರಾಳತನ ಹೆಚ್ಚು. ಅದರಿಂದಲೇ ಆಗಾಗ ಸಣ್ಣಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುವುದು.

 

ಕೆಲವು ಸಂದರ್ಭಗಳಲ್ಲಿ ತಮ್ಮನ್ನು ತಾವು ಬಚಾವ್‌ ಮಾಡಿಕೊಳ್ಳಲು ಬೇರೆಯವರನ್ನು ಹರಕೆ ಕುರಿ ಮಾಡುತ್ತಿದ್ದಾರೆ. ಅಂತೆಯೇ ನಿಮ್ಮನ್ನು ಇಕ್ಕಟ್ಟಿನ ಪರಿಸ್ಥಿತಿಗೆ ತಳ್ಳಲು ಕೆಲವರು ಹೊಂಚು ಹಾಕಿ ಕಾಯುತ್ತಿರುವರು. ಈ ದಿನ ಅಂತಹ ಸುಳಿಯಿಂದ ಬಚಾವ್‌ ಆಗುವಿರಿ.

ನೀವು ಮಾಡುವ ವಾದ ಅಥವಾ ವಿಚಾರಧಾರೆಯನ್ನು ನಿಮ್ಮ ಸಂಗಾತಿಯು ತಿರಸ್ಕರಿಸುವುದರಿಂದ ಮನೆಯಲ್ಲಿ ವಿರಸ ಮೂಡುವ ಸಾಧ್ಯತೆ ಇದೆ. ಆದರೆ ಅದನ್ನು ನೀವು ಚಾಣಾಕ್ಷ ತನದಿಂದ ತಿಳಿಸಿದಲ್ಲಿ ಒಳಿತಾಗುವುದು ಮತ್ತು ನಿಮ್ಮ ಮೇಲೆ ಗೌರವ ಮೂಡವುದು.

 

ಬದುಕಿನ ಹಳಿ ಸರಿಯಾಗಿದೆ. ಸರಿಯಾದ ದಾರಿಯಲ್ಲಿಯೇ ಸಾಗುತ್ತಿದ್ದೀರಿ. ಇಂತಹ ಸನ್ನಿವೇಶದಲ್ಲೇ ಕೆಲವು ಸಲ ಮೈಮರೆಯುವುದರಿಂದ ಅಪಾಯಗಳು ಎದುರಾಗುವುದು. ಈ ಬಗ್ಗೆ ಎಚ್ಚರಿಕೆಯಿಂದ ಇದ್ದಲ್ಲಿ ಎಲ್ಲವೂ ಸುಗಮವಾಗಲಿದೆ.

 

ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಕೆಳಗೆ ನೂಕುವ ಸಂದರ್ಭವಿರುತ್ತದೆ. ಹಾಗಾಗಿ ಹಮ್ಮಿಕೊಂಡ ಕಾರ್ಯ ಪೂರ್ಣವಾಗುವವರೆಗೂ ಆ ವಿಷಯವನ್ನು ಬಹಿರಂಗ ಮಾಡದಿರಿ. ಸಂಗಾತಿಯ ಮತ್ತು ಮಕ್ಕಳ ಮಾತನ್ನು ಆಲಿಸಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top