fbpx
ಸಮಾಚಾರ

ನಾಗಚೈತನ್ಯ-ಸಮಂತಾ ದಾಂಪತ್ಯದಲ್ಲಿ ಬಿರುಕು? ವಿಚ್ಛೇದನಕ್ಕೆ ಮುಂದಾದ್ರಾ ಸ್ಟಾರ್ ಜೋಡಿ

ಟಾಲಿವುಡ್​ನ ಕ್ಯೂಟ್​ ಕಂಪಲ್​ ಎಂದೇ ಹೆಸರು ಪಡೆದಿದ್ದ ಸಮಂತಾ -ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ಇದೇ ಉದ್ದೇಶದಿಂದಲೇ ಈ ಹಿಂದೆ ತಮ್ಮ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ನಟಿ ತಮ್ಮ ಹೆಸರಿನಲ್ಲಿದ್ದ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ದರು. ಇವರ ದಾಂಪತ್ಯದಲ್ಲಿನ ಬಿರುಕು ದೊಡ್ಡ ಸುದ್ದಿಯಾದರೂ ನಾಗ ಚೈತನ್ಯ ಆಗಲೀ, ಸಮಂತಾ ಆಗಲಿ ಜೊತೆ ಅಕ್ಕಿನೇನಿ ನಾಗರ್ಜುನ್​ ಕುಟುಂಬವಾಗಲಿ ಪ್ರತಿಕ್ರಿಯಿಸಿಲ್ಲ.

ಅಕ್ಕಿನೇನಿ ಕುಟುಂಬದ ಸೊಸೆಯಾಗಿ ಬಂದ ಸಮಂತಾ ತನ್ನ ಹೆಸರಿನ ಜೊತೆ ಈ ಮನೆತನದ ಹೆಸರನ್ನೂ ಸೇರಿಸಿಕೊಂಡರು. ಚಿತ್ರರಂಗದಲ್ಲಿ ಸಮಂತಾ ಅಕ್ಕಿನೇನಿ ಎಂದು ಗುರುತಿಸಿಕೊಂಡರು. ಆದರೆ, ಕೆಲ ದಿನಗಳ ಹಿಂದೆ ಏಕಾಏಕಿ ಅಭಿಮಾನಿಗಳಿಗೆ ಆಘಾತ ನೀಡಿದ ಈಕೆ, ಫೇಸ್ ಬುಕ್, ಟ್ವಿಟರ್ ಹಾಗೂ ಇನ್ ಸ್ಟಾಗ್ರಾಂನಲ್ಲಿ ‘ಅಕ್ಕಿನೇನಿ’ ಹೆಸರು ತೆಗೆದು ಹಾಕಿದರು. ಇದು ಸಹಜವಾಗಿ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತು.

2010ರಲ್ಲಿ ತೆರೆಕಂಡ ‘ಯೇ ಮಾಯಾ ಚೆಸಾವಾ’ ಸಿನಿಮಾದಲ್ಲಿ ತೆರೆ ಮೇಲೆ ಜೋಡಿಯಾಗಿದ್ದ ಇವರು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ದಾಂಪತ್ಯ ಜೀವನ ಪ್ರಾರಂಭವಾಗಿ ಕೇವಲ ನಾಲ್ಕು ವರ್ಷಗಳವಷ್ಟೇ ಆಗಿದೆ. ಈಗ ಇವರ ನಡುವೆ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲವು ಮೂಲಗಳ ಪ್ರಕಾರ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆಯಲು ಮುಂದಾಗಿದ್ದಾರಂತೆ. ಅದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ, ಈ ಜೋಡಿ ಕೆಲ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top