fbpx
ಸಮಾಚಾರ

ಮೈಸೂರು ಅತ್ಯಾ’ಚಾರ ಪ್ರಕರಣ: ಕೊಟ್ಟ ಮಾತಿನಂತೆ ₹1 ಲಕ್ಷ ನೀಡಿದ ಜಗ್ಗೇಶ್ ದಂಪತಿ

ಮೈಸೂರು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕರ್ನಾಟಕ ರಾಜ್ಯ ಪೊಲೀಸರಿಗೆ ನಟ ಜಗ್ಗೇಶ್ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೇ ಈ ಪ್ರಕರಣ ಬೇಧಿಸಿದ ಪೊಲೀಸ್​ ಸಿಬ್ಬಂದಿಗಳಿಗೆ ಒಂದು ಲಕ್ಷ ರೂ ಬಹುಮಾನ ನೀಡಿದ್ದಾರೆ.

ಕೆಕೆ ಗೆಸ್ಟ್​ ಹೌಸ್​ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾದ ನಟ ಜಗ್ಗೇಶ್​ ಮತ್ತು ಅವರ ಪತ್ನಿ ಪರಿಮಳ ಜಗ್ಗೇಶ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಒಂದು ಲಕ್ಷ ರೂ ಮೌಲ್ಯದ ಚೆಕ್​ ನೀಡಿದರು.

 

 

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್​.. ಮೈಸೂರಿನ ಅತ್ಯಾಚಾರ ಆರೋಪಿಗಳ ಬಂಧಿಸಿದ ಪೋಲಿಸರಿಗೆ ಕಾರ್ಯದಕ್ಷತೆಗೆ ನನ್ನ ವೈಯಕ್ತಿಕ 1ಲಕ್ಷ ರೂ ಗಳ ಹಣದ ಚಕ್ ಗೃಹ ಮಂತ್ರಿಗಳು ಅರಗ ಜ್ಞಾನೇಂದ್ರರಿಗೆ ಒಪ್ಪಿಸಿದೆ. ಮೈಸೂರು ಪೋಲಿಸರಿಗೆ ಇರಲಿ ನಿಮ್ಮ ಬೆಂಬಲ ಪ್ರೋತ್ಸಾಹ. ನಮ್ಮ ಮನೆಯ ಹೆಣ್ಣಂತೆ ಅಲ್ಲವೆ ಅನ್ಯಮಕ್ಕಳು ಕೂಡ…ಹರಿಃಓಂ ಎಂದು ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 24 ರಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದಂತ ಆಕ್ರೋಶ ವ್ಯಕ್ತವಾಗಿತ್ತು.. ಪ್ರಕರಣ ಭೇದಿಸಿದರೆ ಪೊಲೀಸ್ ಸಿಬ್ಬಂದಿಗೆ ಒಂದು ಲಕ್ಷ ನೀಡುವುದಾಗಿ ಜಗ್ಗೇಶ್ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top