fbpx
ಸಮಾಚಾರ

ಅಣ್ಣ ತಮ್ಮನ ಅಪೂರ್ವ ಸಂಗಮ: ಡ್ರೋನ್ ಪ್ರತಾಪ್ ಭೇಟಿಯಾದ ಒಳ್ಳೇ ಹುಡ್ಗ ಪ್ರಥಮ್

ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಈಗಾಗಲೇ ದೇವ್ರಂಥ ಮನುಷ್ಯ, ಎಂಎಲ್‌ಎ, ನಟ ಭಯಂಕರ ಹೀಗೆ ಒಂದರ ಹಿಂದೊಂದು ಸಿನಿಮಾ ಮಾಡಿಕೊಂಡು ಬರುತ್ತಿದ್ಧಾರೆ. ಈ ಬಾರಿ ಅವರು ‘ಡ್ರೋನ್ ಪ್ರಥಮ್‌’ ಅನ್ನೋ ಸಿನಿಮಾಗೆ ಚಾಲನೆ ಕೊಟ್ಟಿದ್ದಾರೆ.

ಡ್ರೋನ್ ಪ್ರತಾಪ್ ಜೀವನ ಆಧರಿಸಿ ಸಿನಿಮಾ ಮಾಡಲಾಗಿದ್ದು, ಡ್ರೋನ್ ಪ್ರಥಮ್ ಎಂದು ಹೆಸರಿಡಲಾಗಿದೆ.  ಈ ಚಿತ್ರದಲ್ಲಿ ಪ್ರಥಮ್ ನಾಯಕ ಮಾತ್ರವಲ್ಲ ನಿರ್ದೇಶಕರೂ ಹೌದು. ಪ್ರತಾಪ್ ಅವರ ಹಾವ, ಭಾವ ಹಾಗೂ ಜೀವನದ ಬಗ್ಗೆ ತಿಳಿದುಕೊಳ್ಳಲು ಪ್ರಥಮ್ ನಾಲ್ಕು ತಿಂಗಳು ರೀಸರ್ಚ್ ಮಾಡಿದ್ದಾರೆ.

ಪ್ರತಾಪ್ ರನ್ನು ಮೀಟ್ ಮಾಡಿದ ವಿಚಾರವನ್ನು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘Pick of the year! ಡ್ರೋನ್ ಪ್ರಥಮ್ ಮೀಟ್ಸ್ ಡ್ರೋನ್ ಪ್ರತಾಪ್. ಇನ್ಮೇಲೆ ಇವ್ನು ನನ್ನ ತಮ್ಮ! ಅಪೂರ್ವ ಸಂಗಮ! ನನ್ನ ತಮ್ಮ ಸಿಕ್ಬಿಟ್ಟ! #Dronepratham, ಮುಂದಿನವಾರದಿಂದ ಚಿತ್ರೀಕರಣ ಶುರು’ ಎಂದು ಪ್ರಥಮ್ ಬರೆದುಕೊಂಡಿದ್ದಾರೆ. ಜೊತೆಗೆ ಪ್ರತಾಪ್​ ಜತೆ ತೆಗೆಸಿಕೊಂಡ ಕೆಲವು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top