fbpx
ಸಮಾಚಾರ

ಐಪಿಎಲ್ ಆರಂಭಕ್ಕೂ ಮುನ್ನ RCBಗೆ ಆಘಾತ: ಆರಂಭಕ್ಕೂ ಮೊದಲೇ ಸ್ಟಾರ್ ಆಟಗಾರ ಔಟ್

14ನೇ ಆವೃತ್ತಿಯ ಐಪಿಎಲ್ ಕೂಟ ಇನ್ನು ಕೆಲವೇ ವಾರಗಳಲ್ಲಿ ಪುನರಾರಂಭವಾಗಲಿದೆ. ತಂಡಗಳು ಈಗಾಗಲೇ ಯುಎಇಗೆ ಹೊರಟಿದೆ. ಅಭ್ಯಾಸದಲ್ಲಿ ತೊಡಗಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲವು ಪ್ರಮುಖ ವಿದೇಶಿ ಆಟಗಾರರ ಅನುಪಸ್ಥಿತಿಯ ಕಾರಣ ಹೊಸ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಇದೀಗ ಪ್ರಮುಖ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೂಡಾ ಹೊರಬಿದ್ದಿದ್ದು, ಆರ್ ಸಿಬಿ ಗೆ ತಲೆನೋವಾಗಿ ಪರಿಣಮಿಸಿದೆ.

ಹೌದು, ಇತ್ತೀಚೆಗೆ ಇಂಗ್ಲೆಂಡ್​ನಲ್ಲಿ ನಡೆದ ಟೀಮ್ ಇಂಡಿಯಾ ಹಾಗೂ ಕೌಂಟಿ ಸೆಲೆಕ್ಟ್ ಇಲೆವೆನ್ ನಡುವಣ ಅಭ್ಯಾಸ ಪಂದ್ಯದ ವೇಳೆ ಆರ್​ಸಿಬಿ (RCB) ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದರು. ಅಷ್ಟೇ ಅಲ್ಲದೆ ಗಾಯದ ಪರಿಣಾಮ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಿಂದ ಸುಂದರ್ ಹೊರಬಿದ್ದಿದ್ದರು. ಇದೀಗ ಆರ್​ಸಿಬಿ ಆಟಗಾರನ ಬೆರಳಿಗೆ ಗಂಭೀರ ಗಾಯವಾಗಿದೆ ಎಂಬ ರಿಪೋರ್ಟ್ ಬಂದಿದೆ. ಈ ಗಾಯವು ಗುಣಮುಖವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ವೈದ್ಯರ ವರದಿ ತಿಳಿಸಿದೆ.

ಕೈ ಬೆರಳಿನ ಮೂಳೆ ಮುರಿತದ ಸಮಸ್ಯೆ ಎದುರಾಗಿರುವ ಕಾರಣ ಕನಿಷ್ಠ 2-3 ತಿಂಗಳ ವಿಶ್ರಾಂತಿ ಅಗತ್ಯವಿರುವ ಕಾರಣ ಸೆಪ್ಟೆಂಬರ್‌ 17ರಂದು ಆರಂಭವಾಗಲಿರುವ ಐಪಿಎಲ್ 2021 ಟೂರ್ನಿಯ ಎರಡನೇ ಚರಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸೇವೆಗೆ ವಾಂಷಿಂಗ್ಟನ್‌ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.

ಆಕಾಶ್ ದೀಪ್ ಬದಲಿ ಆಟಗಾರ:
ಆರ್‌ಸಿಬಿ ತಂಡ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದು ಮಾಹಿತಿಯನ್ನು ಖಚಿತಪಡಿಸಿದೆ. ವಾಶಿಂಗ್ಟನ್ ಸುಂದರ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಕೂಡ ಆರ್‌ಸಿಬಿ ಸೇರ್ಪಡೆಗೊಳಿಸಿದೆ. ಬಂಗಾಳದ ಕ್ರಿಕೆಟರ್ ಆಕಾಶ್ ದೀಪ್ ವಾಶಿಂಗ್ಟನ್ ಸುಂದರ್ ಅವರಿಗೆ ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಈ ನಿರ್ಧಾರ ಆರ್‌ಸಿಬಿ ಯುವ ಆಟಗಾರರಿಗೆ ಅವಕಾಶ ನೀಡುವ ಮತ್ತು ಪೋಷಿಸುವತ್ತ ಗಮನಹರಿಸುವುದನ್ನು ಪುನರುಚ್ಚರಿಸುತ್ತದೆ. ಏಕೆಂದರೆ ತಂಡವು ಅಸಾಧಾರಣ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದೆ ಮತ್ತು ಯುವ ಪ್ರತಿಭೆಗಳಿಗೆ ಐಪಿಎಲ್ ಮತ್ತು ಭಾರತೀಯ ಕ್ರಿಕೆಟ್‌ಗೆ ಹಾದಿ ಕಂಡುಕೊಳ್ಳಲು ಅವಕಾಶವನ್ನು ಸೃಷ್ಟಿಸುತ್ತದೆ” ಎಂದು ಆರ್‌ಸಿಬಿ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top