fbpx
ಸಮಾಚಾರ

ಆಗಸ್ಟ್ 31: ಇಂದಿನ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಆಗಸ್ಟ್ 31, 2021 ಮಂಗಳವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ನವಮೀ 4:22 am
ನಕ್ಷತ್ರ : ರೋಹಿಣಿ 9:44 am
ಯೋಗ : ಹರ್ಷನ 8:49 am
ಕರಣ : ತೈತುಲ 3:13 pm ಗರಿಜ 4:22 am

Time to be Avoided
ರಾಹುಕಾಲ : 3:23 pm – 4:55 pm
ಯಮಗಂಡ : 9:15 am – 10:47 am
ದುರ್ಮುಹುರ್ತ : 8:39 am – 9:28 am, 11:09 pm – 11:56 pm
ವಿಷ : 3:59 pm – 5:47 pm
ಗುಳಿಕ : 12:19 pm – 1:51 pm

Good Time to be Used
ಅಮೃತಕಾಲ : 2:44 am – 4:31 am
ಅಭಿಜಿತ್ : 11:55 am – 12:44 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:31 pm
ರವಿರಾಶಿ : ಸಿಂಹ
ಚಂದ್ರರಾಶಿ : ವೃಷಭ upto 23:12

 

 

 

ಬದುಕು ಕವಲು ಹಾದಿಯಲ್ಲಿದೆ ಎನ್ನವುದು ನಿಮ್ಮ ಭ್ರಮೆ. ಸಣ್ಣಪುಟ್ಟ ಸಮಸ್ಯೆಗಳು ಜೀವನದಲ್ಲಿ ಎದುರಾಗುವುದು. ಆದರೆ ಅದು ಕೂಡ ಮಂಜಿನಂತೆ ಕರಗುವುದು. ಆ ಬಗ್ಗೆ ಹೆಚ್ಚು ಚಿಂತನೆ ಮಾಡದೆ ನಿಶ್ಚಿಂತೆಯಿಂದ ಇರಿ.

ಇದ್ದಕ್ಕಿದ್ದಂತೆ ಅಧ್ಯಾತ್ಮದಲ್ಲಿ ಆಸಕ್ತಿ ಮೂಡುವುದು. ಬದುಕಿನ ಅನೇಕ ಪ್ರಶ್ನೆಗಳಿಗೆ ಅಧ್ಯಾತ್ಮದಲ್ಲಿ ಉತ್ತರ ದೊರೆಯುವುದು. ಮಡದಿ ಮಕ್ಕಳೊಡನೆ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಮನೋಕಾಮನೆಗಳು ಪೂರ್ಣವಾಗುವುದು. ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುವುದು.

ಸ್ವಾರ್ಥಿಯಾಗಿ ಬದುಕುವ ಚಿಂತನೆ ಬಿಟ್ಟು ಎಲ್ಲರ ನೆರವಿಗೂ ಧಾವಿಸಿ. ನಿಮ್ಮ ವಿಚಾರಧಾರೆಗಳನ್ನು, ನಿಮ್ಮ ಸ್ನೇಹಿತರ ಸಲಹೆಯನ್ನು ಪುರಸ್ಕರಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಆರೋಗ್ಯದ ಕಡೆ ಗಮನವಿರಲಿ.

ಗೆಳೆಯನ ಸ್ನೇಹವನ್ನು ಮರಳಿ ಗಳಿಸಲು ಒಂದು ಮುಗುಳು ನಗು ಸಾಕು. ಅಹಂಕಾರವನ್ನು ಬದಿಗೊತ್ತಿ ಸ್ನೇಹಿತನಿಗೆ ಸಹಾಯ ಮಾಡುವಿರಿ. ಮಕ್ಕಳ ಪ್ರಗತಿಯು ನಿಮ್ಮನ್ನು ಸಂತೋಷಪಡಿಸುವುದು. ಆರ್ಥಿಕ ಸ್ಥಿತಿ ಉತ್ತಮ.

 

ನೀವು ಏನೆಂಬುದನ್ನು ಪುನಃ ಸಾಬೀತುಪಡಿಸುವ ಕಾಲ. ಎಷ್ಟು ಎಚ್ಚರವಿದ್ದರೂ ಕಡಿಮೆ. ಅನೀರೀಕ್ಷಿತ ಧನಲಾಭ. ಭಾವನಾತ್ಮಕವಾಗಿ ಜನರನ್ನು ಸೆಳೆದು ಮೆಚ್ಚುಗೆ ಗಿಟ್ಟಿಸಿಕೊಳ್ಳುವಿರಿ.

 

ಅನಿರೀಕ್ಷಿತವಾಗಿ ಪ್ರೀತಿ ಪಾತ್ರರ ಭೇಟಿಯಾಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಅಲ್ಪ ನಷ್ಟ ಕಂಡುಬರುವುದು. ಹಿರಿಯರ ಮೇಲೆ ವಿನಾಕಾರಣ ಮುನಿಸು ತೋರಿಸಬೇಡಿ. ಪ್ರೀತಿ-ಪ್ರೇಮ ಪ್ರಕರಣಗಳಿಂದ ದೂರವಿರುವುದು ಒಳ್ಳೆಯದು.

 

ನಿಮ್ಮ ಸಮಸ್ಯೆಗಳಿಗೆ ಆತ್ಮೀಯರಿಂದ ಉತ್ತಮ ಸಲಹೆ ಸಿಗುವುದು. ಖಾಸಗಿ ಕಂಪೆನಿ ನೌಕರರಿಗೆ ಸಂತಸದ ಸುದ್ದಿ ದೊರೆಯುವುದು. ತಾಯಿಯ ಕಡೆಯಿಂದ ಆರ್ಥಿಕ ನೆರವು ದೊರೆಯಲಿದೆ. ಆರ್ಥಿಕ ಸಮಸ್ಯೆಗಳು ಒಂದು ತಾತ್ವಿಕ ಕೊನೆ ಕಾಣಲಿದೆ.

 

ಪ್ರೀತಿ ಪಾತ್ರರಾದ ವ್ಯಕ್ತಿಗಳಿಂದ ಸಂತೋಷದ ಸಮಾಚಾರ ಕೇಳುವಿರಿ. ಕಚೇರಿಯಲ್ಲಿ ಒಂದಷ್ಟು ಒಳ್ಳೆಯ ಬದಲಾವಣೆಗಳು ಆಗುವುದು. ವೃತ್ತಿಯಲ್ಲಿ ಅದ್ಭುತ ಸಾಧನೆ ಮಾಡುವಿರಿ. ನಿಮ್ಮನ್ನು ಕಾಡುತ್ತಿದ್ದ ಸಮಸ್ಯೆಗೆ ಉತ್ತರ ದೊರೆಯುವುದು.

 

ನಿಮ್ಮ ತಾಳ್ಮೆಯನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವರು. ಆದರೆ ಕೆಲಸ ಕಾರ್ಯಗಳಲ್ಲಿನ ನಿಮ್ಮ ತನ್ಮತೆಯು ನಿಮಗೆ ಹೆಚ್ಚಿನ ಗೌರವವನ್ನು ನೀಡುವುದು. ಮನಃಶಾಂತಿಗಾಗಿ ಕುಲದೇವರನ್ನು ಪ್ರಾರ್ಥಿಸಿರಿ.

ವೃತ್ತಿಯಲ್ಲಿ ಹೊಸ ಹೊಸ ಸವಾಲು ಸಮಸ್ಯೆಗಳು ಎದುರಾಗುವುದು. ಅವುಗಳನ್ನು ಬಿಡಿಸಿಕೊಳ್ಳುವುದರಲ್ಲಿಯೇ ದಿನ ಪೂರ್ತಿ ಕಳೆದು ಹೋಗುವುದು. ಸ್ನೇಹಿತರ ಸಹಾಯವನ್ನು ಪಡೆದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು.

 

ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ ಉಂಟಾಗುವ ಸಂಭವವಿದೆ. ಆದಷ್ಟು ಮನಸ್ಸನ್ನು ಕೆಡಿಸಿಕೊಳ್ಳದೆ ಶಾಂತಚಿತ್ತರಾಗಿ ಸಂದರ್ಭಗಳನ್ನು ಎದುರಿಸಿರಿ. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುವುದು.

 

ವೃತ್ತಿಯಲ್ಲಿ ಕೊಂಚ ಪ್ರಗತಿಯ ಅನುಭವ ಕಂಡುಬರುವುದು. ಆದರೆ ನಿರೀಕ್ಷಿಸಿದ ಲಾಭ ಆಗದೇ ತುಸು ನಿರಾಸೆಯಾಗುವುದು. ಪರಿಸ್ಥಿತಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದೇ ಉತ್ತಮ ಎನ್ನುವುದನ್ನು ಮರೆಯದಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top