fbpx
ಸಮಾಚಾರ

ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಮತ್ತೆ ನಿರಾಸೆ

ಭಜರಂಗಿ 2’ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ. ಆದರೆ ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಹಾಗೂ ವಾರಾಂತ್ಯದ ಲಾಕ್‌ಡೌನ್‌ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಟ ಶಿವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷೆಯ ಬಿಗ್‌ಬಜೆಟ್‌ ಚಿತ್ರ ‘ಭಜರಂಗಿ–2’ ಬಿಡುಗಡೆ ಮುಂದೂಡಲಾಗಿದೆ. 

ಸೆ.1ರಂದು ನಮ್ಮ ಚಿತ್ರದ ಟ್ರೇಲರ್​ ಬಿಡುಗಡೆ ಆಗಬೇಕಿತ್ತು. ಸೆ.10 ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ನಿಮಗೂ ಗೊತ್ತು. ಕೊರೊನಾ ಕೇಸ್​ಗಳು ಜಾಸ್ತಿ ಆಗುತ್ತಿವೆ. ವೀಕೆಂಡ್​ ಲಾಕ್​ಡೌನ್​ ಮತ್ತು ನೈಟ್​ ಕರ್ಫ್ಯೂ ಇರುವುದರಿಂದ ಸೆ.10ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

‘ಆದಷ್ಟು ಬೇಗ ಹೊಸ ರಿಲೀಸ್​ ದಿನಾಂಕವನ್ನು ನಾವು ನಿಮಗೆ ತಿಳಿಸುತ್ತೇವೆ. ತುಂಬಾ ಲೇಟ್​ ಆಗುವುದಿಲ್ಲ. ಆದಷ್ಟು ಬೇಗ ರಿಲೀಸ್​ ಮಾಡಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ. ಶೇ.100ರಷ್ಟು ಚಿತ್ರಮಂದಿರ ತುಂಬಿದ್ದಾಗಲೇ ಜನರು ಸಿನಿಮಾದ ಮಜವನ್ನು ಅನುಭವಿಸಬಹುದು. ತಡ ಆಗುತ್ತಿರುವುದಕ್ಕೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಟ್ರೇಲರ್​ ರಿಲೀಸ್​ ಮಾಡಿ, ಅದರಲ್ಲೇ ಹೊಸ ರಿಲೀಸ್​ ಡೇಟ್​​ ತಿಳಿಸುತ್ತೇವೆ’ ಎಂದು ಶಿವಣ್ಣ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top