fbpx
ಸಮಾಚಾರ

IPL 2021: RCB ತಂಡಕ್ಕೆ ಆಯ್ಕೆಯಾದ ಆಕಾಶ್ ದೀಪ್

ಇಂಡಿಯನ್ ಪ್ರೀಮಿಯರ್ ಲೀಗ್​ನ ದ್ವಿತಿಯಾರ್ಧದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್​ರೌಂಡರ್ ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ. ಈ ಹಿಂದೆ ಇಂಗ್ಲೆಂಡ್ ಪ್ರವಾಸದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದ ಸುಂದರ್ ಅವರ ಗಾಯ ಇನ್ನು ಗುಣಮುಖವಾಗಿಲ್ಲ. ಹೀಗಾಗಿ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಇತ್ತ ವಾಷಿಂಗ್ಟನ್ ಸುಂದರ್​ ಹೊರಗುಳಿಯುತ್ತಿದ್ದಂತೆ ಆರ್​ಸಿಬಿ ತಂಡ ಬದಲಿ ಆಟಗಾರನಾಗಿ ಆಕಾಶ್ ದೀಪ್ ಹೆಸರನ್ನು ಘೋಷಿಸಿದೆ. ಅಂದರೆ ಹೊಸ ಆಟಗಾರನ ಆಯ್ಕೆಯ ಬದಲಾಗಿ ತಂಡದಲ್ಲಿದ್ದ ನೆಟ್ ಬೌಲರ್​ನನ್ನೇ ಆರ್​​ಸಿಬಿ ತಂಡ ಆರಿಸಿಕೊಂಡಿದೆ. ಆರ್ಸಿಬಿ ಪಾಳಯದಲ್ಲಿ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಕಾಶ್ ದೀಪ್ ಅವರನ್ನು ಅಧಿಕೃತ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.

ಆಕಾಶ್ ದೀಪ್ ಬದಲಿ ಆಟಗಾರ:
ಆರ್‌ಸಿಬಿ ತಂಡ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದ್ದು ಮಾಹಿತಿಯನ್ನು ಖಚಿತಪಡಿಸಿದೆ. ವಾಶಿಂಗ್ಟನ್ ಸುಂದರ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಕೂಡ ಆರ್‌ಸಿಬಿ ಸೇರ್ಪಡೆಗೊಳಿಸಿದೆ. ಬಂಗಾಳದ ಕ್ರಿಕೆಟರ್ ಆಕಾಶ್ ದೀಪ್ ವಾಶಿಂಗ್ಟನ್ ಸುಂದರ್ ಅವರಿಗೆ ಬದಲಿ ಆಟಗಾರನಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈ ನಿರ್ಧಾರ ಆರ್‌ಸಿಬಿ ಯುವ ಆಟಗಾರರಿಗೆ ಅವಕಾಶ ನೀಡುವ ಮತ್ತು ಪೋಷಿಸುವತ್ತ ಗಮನಹರಿಸುವುದನ್ನು ಪುನರುಚ್ಚರಿಸುತ್ತದೆ. ಏಕೆಂದರೆ ತಂಡವು ಅಸಾಧಾರಣ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದೆ ಮತ್ತು ಯುವ ಪ್ರತಿಭೆಗಳಿಗೆ ಐಪಿಎಲ್ ಮತ್ತು ಭಾರತೀಯ ಕ್ರಿಕೆಟ್‌ಗೆ ಹಾದಿ ಕಂಡುಕೊಳ್ಳಲು ಅವಕಾಶವನ್ನು ಸೃಷ್ಟಿಸುತ್ತದೆ” ಎಂದು ಆರ್‌ಸಿಬಿ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top