fbpx
ಸಮಾಚಾರ

ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿಕ್ರಾಂತ್ ರೋಣ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಇಡಿ ಶಾಕ್

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಜಾರಿ ನಿರ್ದೇಶನಾಲಯ ಇಂದು ವಿಚಾರಣೆ ನಡೆಸಿದೆ. ಸತತ ಐದು ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ. 

ಕೆಲ ದಿನಗಳ ಹಿಂದೆ ನಾಲ್ಕು ವರ್ಷಗಳ ಹಳೆಯದಾದ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ನಟರು ಮತ್ತು ನಿರ್ದೇಶಕರು ಸೇರಿದಂತೆ ಟಾಲಿವುಡ್ ನ ಪ್ರಮುಖ ಸ್ಟಾರ್ ಗಳಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಪುರಿ ಜಗನ್ನಾಥ್, ಜಾರ್ಮಿ ಕೌರ್, ಮುಮೈತ್ ಖಾನ್, ನವದೀಪ್ ಮತ್ತು ನಂದು ಅವರಿಗೂ ಇಡಿ ಸಮನ್ಸ್ ನೀಡಿತ್ತು. ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ ಜಾಲದ ಸಂಬಂಧವಾಗಿ ಜಾಕ್ವೆಲಿನ್ ವಿಚಾರಣೆ ಮಾಡಲಾಗಿದೆ.

ಸುಕೇಶ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಚೆನ್ನೈನಲ್ಲಿರುವ ಬಂಗಲೆಯಿಂದ 82.5 ಲಕ್ಷ ರೂಪಾಯಿ, 12ಕ್ಕೂ ಹೆಚ್ಚು ಐಷಾರಾಮಿ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ 17ನೇ ವಯಸ್ಸಿಗೆ ಈ ಕೆಲಸಕ್ಕೆ ಇಳಿದಿದ್ದಾನೆ. ಜಾಕ್ವೆಲಿನ್ ಫರ್ನಾಂಡೀಸ್ ಈ ಪ್ರಕರಣದಲ್ಲಿ ಸಾಕ್ಷಿದಾರರು. ಹೀಗಾಗಿ ಜಾರಿ ನಿರ್ದೇಶನಾಲಯ ಇಂದು ಜಾಕ್ವೆಲಿನ್ ಫರ್ನಾಂಡೀಸ್ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top