fbpx
ಮನೋರಂಜನೆ

ಹೆಸರು ಬದಲಿಸಿಕೊಂಡ ‘ಕಾನ್ಸ್ ಟೇಬಲ್ ಸರೋಜ’ ಖ್ಯಾತಿಯ ನಟಿ ತ್ರಿವೇಣಿ

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಟಗರು’ ಸಿನಿಮಾ ಸೇರಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿಯೇ ಗುರುತಿಸಿಕೊಂಡಿತ್ತು. ಚಿತ್ರದಿಂದ ಧನಂಜಯ್ ಹೇಗೆ ಡಾಲಿ ಎಂದು ಖ್ಯಾತಿ ಪಡೆದರೋ ಹಾಗೆ ತ್ರಿವೇಣಿ ಅವರು ಕಾನ್ಸ್‌ಟೇಬಲ್ ಸರೋಜಾ ಎಂಬ ಬಿರುದು ಪಡೆದುಕೊಂಡರು. ಆದರೀಗ ತ್ರಿವೇಣಿ ಹೆಸರು ಬದಲಾಯಿಸಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ  ಹೆಸರು ಬದಲಾಯಿಸಿಕೊಂಡು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.

ಬಹಳಷ್ಟು ಜನರಿಗೆ ಈಕೆಯ ಹೆಸರು ತ್ರಿವೇಣಿ ರಾವ್ ಎಂದು ಗೊತ್ತೇ ಇಲ್ಲ. ಎಲ್ಲೇ ಕಂಡರೂ ಕಾನ್ಸ್ ಟೇಬಲ್ ಸರೋಜಾ ಎಂದೇ ಗುರುತಿಸುತ್ತಾರೆ. ಹೀಗೇ ಒಂದೇ ಒಂದು ಸಣ್ಣ ಪಾತ್ರದ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಇಷ್ಟು ದೊಡ್ಡ ಹವಾ ಸೃಷ್ಟಿಸಿದ ತ್ರಿವೇಣಿ ರಾವ್ ಈಗ ಟಾಲಿವುಡ್‌ನಲ್ಲಿ ಹೆಚ್ಚು ಬ್ಯುಸಿ ಇದ್ದಾರೆ.

ನಡುವೆ ತ್ರಿವೇಣಿ ಅವರು ರುಷಿಕಾ ರಾಜ್ ಎಂದು ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ತಮ್ ಮುಂದಿನ ಚಿತ್ರಗಳಲ್ಲಿ ರುಷಿಕಾ ರಾಜ್ ಎಂದು ಬಳಸಲಾಗುತ್ತದೆ ಎಂದಿದ್ದಾರೆ. ‘ಇನ್ನುಂದೆ ನನ್ನ ಹೆಸರು ರುಷಿಕಾ ರಾಜ್, ನಿಮ್ಮೆಲ್ಲರ ಬೆಂಬಲ ಹೀಗೆ ಮುಂದುವರಿಯಲಿ,’ ಎಂದು ಬರೆದುಕೊಂಡಿದ್ದಾರೆ. 

’ನೀವು ಯಾವುದೇ ಹೆಸರನ್ನು ಇಟ್ಟುಕೊಳ್ಳಿ ನಮಗೆ ಮಾತ್ರ ನೀವು ಕಾನ್‌ಸ್ಟೇಬಲ್‌ ಸರೋಜಾ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top