fbpx
ಸಮಾಚಾರ

ಮತ್ತೆ ಅಮ್ಮನಾಗ್ತಿದ್ದಾರೆ ‘ಫ್ರೆಂಚ್ ಬಿರಿಯಾನಿ’ ನಟಿ: 2ನೇ ಮಗುವಿನ ನಿರೀಕ್ಷೆಯಲ್ಲಿ ದಿಶಾ ಮದನ್

ಕಿರುತೆರೆ ನಟಿ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ದಿಶಾ ಮದನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ ದಿಶಾ ಮದನ್ – ಶಶಾಂಕ್ ವಾಸುಕಿ ಗೋಪಾಲ್ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ವರ್ಷದ ಮಾರ್ಚ್ ಹೊತ್ತಿಗೆ ಎರಡನೇ ಮಗುವಿಗೆ ನಟಿ ದಿಶಾ ಮದನ್ ಜನ್ಮ ನೀಡಲಿದ್ದಾರೆ.

ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತಸದ ವಿಚಾರವಿದೆ. ಕೆಲವು ದಿನಗಳಿಂದ ನಾನು ಕಾಣಿಸದೇ ಇರುವುದಕ್ಕೆ ಕಾರಣ ಇಲ್ಲಿದೆ. ಮಾರ್ಚ್ 2022ಕ್ಕಾಗಿ ನಾವು ಕಾಯುತ್ತಿದ್ದೇವೆ. ನಾವು ಮೂವರಿಂದ ನಾಲ್ವರಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ದಿಶಾ ಮದನ್ ಬರೆದುಕೊಂಡು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.  ವಿಡಿಯೋ ಮೂಲಕ ತಮ್ಮ ವೈವಾಹಿಕ ಜೀವನದಲ್ಲಿ ಆದ ಬದಲಾವಣೆ, ಯಾವ ಹೊಸತನ ಆಗಮಿಸಿದೆ ಎಂದು ಹೇಳಿದ್ದಾರೆ.

ಶಶಾಂಕ್‌ರನ್ನು ದಿಶಾ ಮೊದಲು ಭೇಟಿ ಮಾಡಿದ್ದು 2016- 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2018ರಲ್ಲಿ ಮೊದಲ ಮಗುವಿಗೆ ತಾಯಿಯಾಗಿದ್ದಾರೆ. 2019ರಲ್ಲಿ ಪುತ್ರ ವಿಹಾನ್‌ನ ಬರ ಮಾಡಿಕೊಂಡಿದ್ದಾರೆ. 2020ರಲ್ಲಿ ಹೊಸ ಮನೆ ಖರೀದಿಸಿ ಗೃಹಪ್ರವೇಶ ಮಾಡಿದ್ದಾರೆ. 2021ರಲ್ಲಿ ಇಡೀ ಕುಟುಂಬ ಕೊರೋನಾ ವೈರಸ್‌ ತಗುಲಿತ್ತು. ತಿಂಗಳುಗಳ ಕಾಲ ವಿಶ್ರಾಂತಿ ಪಡೆದು ಚೇತರಿಸಿಕೊಂಡಿದ್ದಾರೆ. 2022ರಲ್ಲಿ ನನ್ನ ಮೊದಲ ಮಗ ಅಣ್ಣನಾಗುತ್ತಾನೆ ಎಂದು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top