fbpx
ಸಮಾಚಾರ

ಜೂ.ಚಿರು ನಾಮಕರಣ: ಮೇಘನಾ ಪುತ್ರನ ಅಸಲಿ ಹೆಸರು ಏನು ಗೊತ್ತಾ?

ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ಜ್ಯೂನಿಯರ್ ಚಿರು ಹೆಸರು ನಾಳೆ ರಿವೀಲ್ ಆಗಲಿದೆ.

ಈ ಕುರಿತಂತೆ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ಮೇಘನಾ ಹಾಗೂ ಚಿರಂಜೀವಿ ಸರ್ಜಾ ಎಂಗೇಜ್ ಮೆಂಟ್ ವೀಡಿಯೋ ಆಗಿದ್ದು, ಇದರ ಜೊತೆಗೆ ಜ್ಯೂನಿಯರ್ ಚಿರುವಿನ ಹಲವಾರು ಹೆಸರುಗಳನ್ನು ಬಹಿರಂಗ ಪಡಿಸಿ. ಕೊನೆಗೆ ಸೆಪ್ಟೆಂಬರ್ 3 ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ರಿವೀಲ್ ಮಾಡುವುದಾಗಿ ಮೇಘನಾ ತಿಳಿಸಿದ್ದಾರೆ.

ನಟಿ ಮೇಘನಾ ರಾಜ್ ಇನ್ಸ್ಟಾಗ್ರಾಮ್ ಪೋಸ್ಟ್
”ನಮ್ಮ ಪುಟಾಣಿ ಪ್ರಿನ್ಸ್‌ಗೆ ಈಗ ಹೆಸರು ಸಿಕ್ಕಿದೆ. ಜೂನಿಯರ್ ಚಿರು ಬಗ್ಗೆ ನನಗೆ ಮೊದಲು ತೂರಿಬಂದ ಪ್ರಶ್ನೆ ”ಏನು ಹೆಸರು ಜೂನಿಯರ್‌ದು?”. ಇದೀಗ ಅದಕ್ಕೆ ಉತ್ತರ ಹೇಳುವ ಸಮಯ ಬಂದಿದೆ. ಮಗನ ಹೆಸರನ್ನು ಸೆಪ್ಟೆಂಬರ್ 3, 2021 ರಂದು ರಿವೀಲ್ ಮಾಡುತ್ತೇವೆ” ಎಂದು ಮೇಘನಾ ರಾಜ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top