fbpx
ಸಮಾಚಾರ

#ENGvIND: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ತೋಳಿಗೆ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಟೀಮ್ ಇಂಡಿಯಾ ಆಟಗಾರರು: ಏಕೆ ಗೊತ್ತಾ

ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯ ಲಂಡನ್ನಿನಲ್ಲಿ ಇಂದಿನಿಂದ ಶುರುವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಕಳುಹಿಸಿದೆ.

ಈ ಮಧ್ಯೆ ಭಾರತ ತಂಡದ ಎಲ್ಲಾ ಆಟಗಾರರು ತಮ್ಮ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿ ಕಣಕ್ಕೆ ತಿಳಿದಿರುವುದು ಕಂಡುಬಂದಿದೆ. ಉಭಯ ತಂಡಗಳ ರಾಷ್ಟ್ರಗೀತೆಯ ವೇಳೆ ಭಾರತ ತಂಡದ ಆಟಗಾರರು ತೋಳಿಗೆ ಕಪ್ಪು ಬಟ್ಟೆಯನ್ನು ಧರಿಸಿ ನಿಂತು ಗಮನಸೆಳೆದರು. ಅಷ್ಟಕ್ಕೂ ಭಾರತ ತಂಡದ ಆಟಗಾರರು ಹೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿದ್ದು ಏಕೆ ಅಂತೀರಾ? ಮುಂದೆ ಓದಿ

ಭಾರತದ ಮಾಜಿ ಕ್ರಿಕೆಟಿಗ ವಾಸುದೇವ್ ಪರಾಂಜಪೆ ಅವರಿಗೆ ಗೌರವ ಸಲ್ಲಿಸಲು ಭಾರತೀಯ ಆಟಗಾರರು ಈ ಕಪ್ಪು ಬ್ಯಾಂಡ್ ಕಟ್ಟಿದ್ದಾರೆ. ಆಗಸ್ಟ್ 30 ಸೋಮವಾರ ವಾಸುದೇವ್ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಬಿಸಿಸಿಐ ಕೂಡ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

ಬಿಸಿಸಿಐ ತಂಡದ ಫೋಟೋವನ್ನು ಟ್ವೀಟ್ ಮಾಡಿ, ಭಾರತೀಯ ಕ್ರಿಕೆಟ್ ತಂಡವು ಇಂದು ವಾಸುದೇವ್ ಪರಾಂಜಪೆಗೆ ಗೌರವ ಸಲ್ಲಿಸಲು ತಮ್ಮ ಕೈಯಲ್ಲಿ ಕಪ್ಪು ಪಟ್ಟಿಯನ್ನು ಧರಿಸಿದೆ ಎಂದು ಬರೆದಿದ್ದಾರೆ. ವಾಸು ಅವರ ಪುತ್ರ ಜತಿನ್ ಪರಂಜಪೆ ಭಾರತದ ಪರ ಆಡಿದ್ದಾರೆ ಹಾಗೂ ರಾಷ್ಟ್ರೀಯ ಆಯ್ಕೆಗಾರರಾಗಿ ಕೆಲಸ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top