fbpx
ಸಮಾಚಾರ

ವಿಕ್ರಾಂತ್ ರೋಣನ ಮೊದಲ ಝಲಕ್ ಬಿಡುಗಡೆ: ಕಿಚ್ಚನ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ

ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ ಅಭಿಮಾನಿಗೆ ಚಿತ್ರತಂಡ ಸಿಹಿ ಸುದ್ದಿ ನೀಡಿದೆ.

 

 

ಕಿಚ್ಚನ ಬರ್ತ್​ ಡೇ ಗಿಫ್ಟ್​ ಆಗಿ ವಿಕ್ರಾಂತ್ ರೋಣ ಸಿನಿಮಾದಿಂದ ಡೆಡ್​ ಮ್ಯಾನ್ಸ್​ ಆ್ಯಂಥಮ್​ ರಿಲೀಸ್ ಆಗಿದೆ. ಈ ವಿಡಿಯೋ ತುಣುಕಿನಲ್ಲಿ ಸಖತ್​ ಆ್ಯಕ್ಷನ್​ ಇದ್ದು, ಸ್ಟೈಲಿಶ್​ ಲುಕ್​ನಲ್ಲಿ ಸುದೀಪ್ ಮಿಂಚಿದ್ದಾರೆ.ಡೆಸ್​ ಮ್ಯಾನ್ಸ್​ ಆ್ಯಂಥಮ್​ ವಿಡಿಯೋದಲ್ಲಿ ಸುದೀಪ್ ಅವರು ಸಖತ್ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಕೇಳಿಸುವ ಹಿನ್ನಲೆ ಧ್ವನಿ ನಿಜಕ್ಕೂ ಗಮನ ಸೆಳೆಯುತ್ತದೆ. ಸುದೀಪ್​ ಅವರ ಆ್ಯಕ್ಷನ್​ ಸೀನಗಳು ಅಭಿಮಾನಿಗಳಿಗೆ ಸಖತ್ ಮನರಂಜಿಸುತ್ತವೆ.

ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಚಿತ್ರತಂಡವು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top