fbpx
ಸಮಾಚಾರ

ಹಿಂದೂ-ಕ್ರೈಸ್ತ್ರ ಸಂಪ್ರದಾಯದಂತೆ ನಡೆಯಿತು ಚಿರು ಸರ್ಜಾ ಮಗನ ನಾಮಕರಣ: ಜೂ. ಚಿರು ಹೆಸರೇನು ಗೊತ್ತಾ?

ಇಷ್ಟು ದಿನ ಜೂನಿಯರ್​ ಚಿರು ಆಗಿದ್ದ ಸರ್ಜಾ ಕುಟುಂಬದ ಕುಡಿಗೆ ಇಂದು ಅಧಿಕೃತ ಹೆಸರು ಸಿಕ್ಕಿದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್​ ಅವರ ಇಂದು ನಾಮಕರಣ ಮಾಡಲಾಗಿದ್ದು, ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ.

ನಗರದ ಚಾನ್ಸರಿ ಪೆವಿಲಿಯನ್‌ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ನಟ ಧ್ರುವ ಸರ್ಜಾ ದಂಪತಿ ಸೇರಿದಂತೆ ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ನಾಮಕರಣದ ವಿಡಿಯೊವೊಂದನ್ನು ಮೇಘನಾ ರಾಜ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ರಾಯನ್‌ ರಾಜ್‌ ಸರ್ಜಾ– ನಮ್ಮ ಯುವರಾಜ’ ಎಂದು ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ಚಿರಂಜೀವಿ ಸರ್ಜಾ ಅವರನ್ನೂ ಮೇಘನಾ ನೆನಪಿಸಿಕೊಂಡಿದ್ದಾರೆ.

ಇಷ್ಟು ದಿನ ಚಿಂಟು, ಸಿಂಬಾ, ಪಾಪ ಕುಟ್ಟಿ, ಜೂನಿಯರ್ ಚಿರು, ಜ್ಯೂನಿಯರ್ ಸಿಂಗ ಹೀಗೆ ಹಲವಾರು ಮುದ್ದಾದ ಹೆಸರುಗಳಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಚಿರು ಪುತ್ರನನ್ನು ಕರೆಯುತ್ತಿದ್ದರು. ಆದರೆ ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿರುವುದಾಗಿ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top