fbpx
ಸಮಾಚಾರ

ಸೆಪ್ಟೆಂಬರ್ 03: ಇಂದಿನ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಸೆಪ್ಟೆಂಬರ್ 2, 2021 ಗುರುವಾರ
ವರ್ಷ : 1943 ಪ್ಲಾವ
ತಿಂಗಳು : ಶ್ರಾವಣ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ದಶಮೀ 6:21 am
ನಕ್ಷತ್ರ : ಆರುಧ್ರ 2:57 pm
ಯೋಗ : ಸಿಧ್ಧಿ 10:09 am
ಕರಣ : ವಿಷ್ಟಿ 6:21 am ಬಾವ 7:07 pm

Time to be Avoided
ರಾಹುಕಾಲ : 1:50 pm – 3:22 pm
ಯಮಗಂಡ : 6:12 am – 7:43 am
ದುರ್ಮುಹುರ್ತ : 10:16 am – 11:05 am, 3:10 pm – 3:59 pm
ವಿಷ : 3:49 am – 5:32 am
ಗುಳಿಕ : 9:15 am – 10:47 am

Good Time to be Used
ಅಮೃತಕಾಲ : Nil
ಅಭಿಜಿತ್ : 11:54 am – 12:43 pm

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:29 pm
ರವಿರಾಶಿ : ಸಿಂಹ
ಚಂದ್ರರಾಶಿ : ಮಿಥುನ

 

 

 

ನಂಬಿದ ಸ್ನೇಹಿತರೇ ನಿಮ್ಮ ದಾರಿ ತಪ್ಪಿಸುವ ಸಾಧ್ಯತೆ ಇದೆ. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಶಕ್ತಿ ನಿಮ್ಮದಾಗಿರುವುದರಿಂದ ಹೆಚ್ಚಿನ ತೊಂದರೆ ಇಲ್ಲ.

ಬಹಳ ದಿನಗಳಿಂದ ದೊಡ್ಡ ಸ್ವರೂಪದಲ್ಲಿ ತಲೆ ತಿನ್ನುತ್ತಿದ್ದ ವಿಚಾರವೊಂದು ಮಂಜುಗಡ್ಡೆಯಂತೆ ಬೇಗನೆ ಕರಗಿ ಹೋಗಲಿದೆ. ಇದರಿಂದ ಮಾನಸಿಕ ಸದೃಢತೆ ಉಂಟಾಗುವುದು. ಕೆಲವರಿಗೆ ವೃತ್ತಿಯಲ್ಲಿ ಬಡ್ತಿ ದೊರೆಯುವುದು.

ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರ ಇರಲಿ. ತುಸುವಾದರೂ ಬಿಗಿ ಮನೋಭಾವ ತೋರುವುದು ಒಳ್ಳೆಯದು. ತೀರ ಒಳ್ಳೆಯತನ ಒಳ್ಳೆಯದಲ್ಲ. ಸ್ನೇಹಿತರು ನಿಮಗೆ ಸಹಾಯ ಮಾಡುವರು.

ತುಂಬಾ ಭಾವನಾತ್ಮಕವಾಗಿ ಬಂಧುಗಳೊಡನೆ ಸ್ಪಂದಿಸುವಿರಿ. ಆದರೆ ಹೊರ ಜಗತ್ತಿನಲ್ಲಿ ಅತಿಯಾದ ಭಾವನಾತ್ಮಕತೆ ತೊಂದರೆಯನ್ನುಂಟು ಮಾಡುವುದು. ಹಿರಿಯರ ಸಲಹೆಯಂತೆ ನಡೆದಲ್ಲಿ ನಿಮಗೆ ಅನ್ಯಾಯವಾಗುವುದು ತಪ್ಪುತ್ತದೆ.

 

ನಿಮ್ಮ ದೇಹಕ್ಕೆ ವಯಸ್ಸಾಗಿದ್ದರೂ ನಿಮ್ಮ ಮನಸ್ಸಿಗೆ ಮುಪ್ಪು ಬಂದಿಲ್ಲ. ಹಾಗಾಗಿ ಕಿರಿಯರೊಡನೆ ಸ್ನೇಹದಿಂದ ವರ್ತಿಸುವಿರಿ. ಆ ಮೂಲಕ ನಿಮ್ಮ ಅಂತರಂಗದ ತುಮುಲಗಳಿಗೆ ಸಾಂತ್ವನ ಕಂಡುಕೊಳ್ಳುವಿರಿ. ಸಮರಸವೇ ಜೀವನ ವಿರಸವೇ ಮರಣ ಎಂಬುದನ್ನು ಅರಿಯುವಿರಿ.

 

ತಿಳಿದು ತಿಳಿದೂ ತಲೆ ಗಟ್ಟಿ ಇದೆ ಎಂದು ಕಲ್ಲುಬಂಡೆಗೆ ತಲೆ ಬಡಿದುಕೊಳ್ಳದಿರಿ. ಅಂದರೆ ನೀವು ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚುವರು ಎಂಬ ಹುಂಬತನದಿಂದ ಮುನ್ನುಗ್ಗಿದರೆ ಸೋಲು ಅನುಭವಿಸಬೇಕಾಗುವುದು. ಸಂಗಾತಿ ಸಲಹೆ ಸ್ವೀಕರಿಸಿ.

 

ಸಂಬಂಧಿಗಳ ಬಳಿ ಹಳೆ ವಿಚಾರಗಳನ್ನು ಕೆದಕಬೇಡಿ. ಕೆದಕಿದರೆ ಉತ್ತಮ ಬಾಂಧವ್ಯ ಮುರಿದು ಬೀಳುತ್ತದೆ. ಹಳೆ ಭಿನ್ನಾಭಿಪ್ರಾಯ ಉತ್ತಮ ಮಾತುಕತೆಯಿಂದ ಕೊನೆಗೊಳ್ಳಲಿದೆ. ಜೀವನದಲ್ಲಿ ಹರ್ಷ ಸಿಗುವುದು.

 

ನಾಲಿಗೆ ಒಳ್ಳೆಯದಿದ್ದರೆ ನಾಡೇ ಒಳ್ಳೆಯದು ಎಂಬಂತೆ ಸ್ನೇಹಜೀವಿಯಾದ ನಿಮ್ಮ ಮಾತನ್ನು ಎಲ್ಲರೂ ಗೌರವಿಸುವರು. ಇದರಿಂದ ಹೊಸ ಸ್ನೇಹಿತರನ್ನು ಸಂಪಾದಿಸುವಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ಹಣಕಾಸು ಕೂಡಾ ಉತ್ತಮವಾಗಿರುತ್ತದೆ.

 

 ನೀವು ಯಾರೊಂದಿಗೂ ಬೆರೆಯದೆ ನೀವಾಯಿತು ನಿಮ್ಮ ಕಾರ್ಯವಾಯಿತು ಎಂದು ಸುಮ್ಮನಿರುವಿರಿ. ಆದರೆ ಎದುರಾಳಿಗಳು ನಿಮ್ಮನ್ನು ಸುಖಾಸುಮ್ಮನೆ ಕೆಣಕುವರು. ಅವರಿಗೆ ಸರಿಯಾದ ಬುದ್ಧಿ ಕಲಿಸುವಿರಿ.

ಆಕಾಶಕ್ಕೆ ಏಣಿ ಹಾಕುವ ನಿಮ್ಮ ಮನಸ್ಸು ನಿಜ ಜೀವನದ ಆಗು ಹೋಗುಗಳ ಕಡೆ ನಿರ್ಲಕ್ಷ ್ಯ ವಹಿಸುವುದರಿಂದ ಬರಬೇಕಾದ ಲಾಭಾದಲ್ಲಿ ಕಡಿಮೆ ಆಗುವುದು. ಮನೆಗೆದ್ದು ಮಾರುಗೆಲ್ಲು ಎಂದರು ಹಿರಿಯರು ಹಾಗಾಗಿ ಸಾವಧಾನ ಇರಲಿ.

 

‘ಮಾತೇ ಮುತ್ತು ಮಾತೇ ಶತ್ರು’ ಎಂಬಂತೆ ಅತಿಯಾದ ಭಾವುಕತೆಯಿಂದ ಕೂಡಿರುವ ಸಣ್ಣ ವಿಷಯವನ್ನು ಗೌಪ್ಯವಾಗಿಡುವಲ್ಲಿ ಸೋಲುವಿರಿ. ಇದರಿಂದ ನಿಮ್ಮ ಮೇಲಿನ ಗೌರವಕ್ಕೆ ಕುಂದುಂಟಾಗುವುದು. ಆದಷ್ಟು ತಾಳ್ಮೆಯಿಂದ ವ್ಯವಹರಿಸಿ.

 

ಎಲ್ಲರನ್ನು ಎಲ್ಲಾ ಕಾಲಕ್ಕೂ ಸಂತೋಷಪಡಿಸಲು ಅಗುವುದಿಲ್ಲ. ಆದರೆ ನೀವು ಆಡುವ ಮಾತು ಇನ್ನೊಬ್ಬರ ಮನ ನೋಯಿಸದಂತೆ ಇರಲಿ. ದೃಢ ನಿರ್ಧಾರವು ನಿಮ್ಮ ಜೀವನದ ಗತಿಯನ್ನು ಬದಲಿಸುವುದು. ಪ್ರಯಾಣಿಸಬೇಕಾದ ಸಿಟಿ ಬಸ್‌ ತಪ್ಪಿ ಹೋಗುವುದರಿಂದ ಸ್ವಂತ ವಾಹನವಿದ್ದರೆ ಚೆನ್ನ ಎನ್ನಿಸುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top