fbpx
ಸಮಾಚಾರ

ನಟಿ ರಕುಲ್ ಪ್ರೀತ್ ಸಿಂಗ್ ಗೆ ಇ.ಡಿ ಸಂಕಷ್ಟ: ಇಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ನಟಿ

ಮಾದಕ ವಸ್ತುಗಳ ಜಾಲದ ಪ್ರಕರಣದಲ್ಲಿನ ಅಕ್ರಮ ಹಣ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿ ದಂತೆ ನಟಿ ರಕುಲ್‌ ಪ್ರೀತ್ ಸಿಂಗ್‌ ಶುಕ್ರವಾರ ಜಾರಿ ನಿರ್ದೇಶನಾಲಯ(ಇ.ಡಿ) ಎದುರು ವಿಚಾರಣೆಗೆ ಹಾಜರಾದರು.

ಇದು 4 ವರ್ಷ ಹಿಂದಿನ ಪ್ರಕರಣ. 2017ರಲ್ಲಿ ದೊಡ್ಡ ಮಾದಕ ವಸ್ತು ಜಾಲ ಪತ್ತೆ ಆಗಿತ್ತು. ಅದರಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವುದು ಕೂಡ ಕಂಡುಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ 12 ಕೇಸ್​ಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಈಗ ಈ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗಿದೆ.

ಮಾದಸ ವಸ್ತು ಸೇವನೆ, ಸರಬರಾಜು ಮತ್ತು ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ರಕುಲ್ ಮಾತ್ರವಲ್ಲ ತೆಲುಗು ಚಿತ್ರರಂಗದ 10 ಮಂದಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ ಎನ್ನಲಾಗಿದೆ.  2017ರಲ್ಲಿಯೂ ರಕುಲ್‌ಗೆ ಡ್ರಗ್ಸ್ ಪ್ರಕರಣದ ಬಗ್ಗೆ ವಿಚಾರಣೆ ನಡೆದಿತ್ತು. ಮಂಗಳವಾರ (ಆಗಸ್ಟ್‌ 31) ಹೈದರಾಬಾದ್‌ ಇಡಿ ಆಫೀಸ್‌ನಲ್ಲಿ ನಿರ್ದೇಶಕ ಪೂರಿ ಜಗನ್ನಾಥ್‌ಗೆ ಈ ಪ್ರಕರಣವಾಗಿ ವಿಚಾರಣೆ ನಡೆಯಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top