fbpx
ಸಮಾಚಾರ

”ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು” ಎಂದು ವಿಕೃತಿ ಮೆರೆದ ಕಿಡಿಗೇಡಿಗಳು: ನಟನ ಪ್ರತಿಕ್ರಿಯೆ ಏನು?

2 ದಿನಗಳ ಹಿಂದೆ ಬಾಲಿವುಡ್ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ವಿಜೇತ ಸಿದ್ಧಾರ್ಥ್ ಶುಕ್ಲ ಅಕಾಲಿಕ ಮರಣ ಹೊಂದಿದ್ದರು ಸಿದ್ಧಾರ್ಥ್ ಶುಕ್ಲಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು ಅವರ ಅಕಾಲಿಕ ಮರಣಕ್ಕೆ ಅಭಿಮಾನಿಗಳು ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಸಂತಾಪ ಸೂಚಿಸಿತ್ತು.

ಈ ನಡುವೆ ಸಿದ್ಧಾರ್ಥ್ ಶುಕ್ಲಾ ಅವರ ಸಾವಿಗೆ ಶ್ರದ್ಧಾಂಜಲಿ ಅರ್ಪಿಸುವ ಬದಲು ಕೆಲವು ವಿಕೃತ ಮನಸ್ಸಿನ ಕಿಡಿಗೇಡಿಗಳು ತಮಿಳು ನಟ ಸಿದ್ದಾರ್ಥ್ ವಿರುದ್ಧ ಉದ್ದೇಶಪೂರಿತ ದ್ವೇಷಿ ಟ್ವೀಟ್ ಗಳನ್ನು ಹರಿಬಿಟ್ಟಿದ್ದಾರೆ. ಸಿದ್ದಾರ್ಥ್​ ಅವರು ಅದನ್ನೆಲ್ಲ ಸಾಕ್ಷಿ ಸಮೇತ ಬಯಲು ಮಾಡಿದ್ದಾರೆ.

 

 

ರಾಜಕೀಯದ ನಿಲುವುಗಳ ಕಾರಣಕ್ಕೆ ಸಿದ್ದಾರ್ಥ್ ಅನೇಕರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರದ ಕೆಲವು ವಿಚಾರಗಳನ್ನು ಅವರು ನೇರವಾಗಿ ಟೀಕಿಸುತ್ತಾರೆ. ಆ ಕಾರಣಕ್ಕಾಗಿ ಅವರನ್ನು ಈಗ ಟಾರ್ಗೆಟ್​ ಮಾಡಲಾಗುತ್ತಿದೆ. ಕೆಲವರಂತೂ ಮಿತಿಮೀರಿ ಕಮೆಂಟ್​ ಮಾಡುತ್ತಿದ್ದಾರೆ. ‘ಆ ಸಿದ್ದಾರ್ಥ್​ ಬದಲಿಗೆ ದೇವರು ಈ ಸಿದ್ದಾರ್ಥ್​ಗೆ ಸಾವು ನೀಡಬಹುದಾಗಿತ್ತು’ ಎಂದು ನಿರ್ಲಜ್ಜೆಯಿಂದ ಕೆಲವರು ಕಮೆಂಟ್​ ಮಾಡಿದ್ದಾರೆ!

ಇಂಥ ಕೆಲವು ಟ್ವೀಟ್​ ಮತ್ತು ಕಮೆಂಟ್​ಗಳನ್ನು ಸಿದ್ದಾರ್ಥ್​ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ವಿಕೃತರ ಬಣ್ಣ ಬಯಲು ಮಾಡಿದ್ದಾರೆ. ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top