fbpx
ಸಮಾಚಾರ

ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡರಾ ಕತ್ರಿನಾ ಕೈಫ್? ಡಿಸೆಂಬರ್ನಲ್ಲಿ ಕತ್ರಿನಾ ಕೈಫ್ & ವಿಕ್ಕಿ ಕೌಶಲ್ ಮದುವೆ

ನಟಿ ಕತ್ರಿನಾ ಕೈಫ್​ ರಿಲೇಶನ್​​ಶಿಪ್​ ವಿಚಾರದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ರಣಬೀರ್​ ಕಪೂರ್​, ಸಲ್ಮಾನ್​ ಖಾನ್​ ಜತೆ ಸುತ್ತಾಟ ನಡೆಸಿದ್ದ ಅವರು, ನಂತರ ಸೈಲೆಂಟ್​ ಆದರು. ಮತ್ತೆ ಯಾರ ಸುದ್ದಿಗೂ ಹೋಗುವ ಸೂಚನೆಯನ್ನು ಅವರು ನೀಡಿರಲಿಲ್ಲ. ಸದ್ಯ, ಬಾಲಿವುಡ್​ ಯಂಗ್​ ಹೀರೋ ವಿಕ್ಕಿ ಕೌಶಲ್​ ಜತೆ ಕತ್ರಿನಾ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗ ಇಬ್ಬರೂ ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಕೂಡ ಮಾಡಿಕೊಂಡಿದ್ದಾರಂತೆ.

ಲೈಫ್‌ಸ್ಟೈಲ್ ಏಷ್ಯಾದಲ್ಲಿ ಪ್ರಕಟವಾದ ಸುದ್ದಿವೊಂದರಲ್ಲಿ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ವಿವಾಹದ ಬಗ್ಗೆ ವಿಕ್ಕಿ ಅಥವಾ ಕತ್ರಿನಾ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಕತ್ರಿನಾ-ವಿಕ್ಕಿ ಅವರ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಅಭಿಮಾನಿಗಳು ಈ ಜೋಡಿಗೆ ವಿಶ್‌ ಮಾಡಲು ಪ್ರಾರಂಭಿಸಿದರು. ನಂತರ ವಿಕ್ಕಿಯ ತಂದೆ ಶ್ಯಾಮ್ ಕೌಶಲ್ ಈ ವರದಿಯನ್ನು ತಳ್ಳಿ ಹಾಕಿದ್ದರು ಮತ್ತು ಅವರ ಮಗನಿಗೆ ನಿಶ್ಚಿತಾರ್ಥವಾಗಿಲ್ಲ ಎಂದು ಹೇಳಿದ್ದರು. ಆದರೆ ಈಗ ಕತ್ರಿನಾ ಮತ್ತು ವಿಕ್ಕಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಇದೇ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಮದುವೆ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ ಆದರೆ ಈ ಸುದ್ದಿಯ ಬಗ್ಗೆ ಆಗಲಿ ಅಥವಾ ಯಾವುದೇ ಸ್ಪಷ್ಟನೆ ನೀಡಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top