fbpx
ಸಮಾಚಾರ

ಕರೋಡ್ ಪತಿ ಶೋನಲ್ಲಿ 25 ಲಕ್ಷ ಗೆದ್ದ ಗಂಗೂಲಿ- ಸೆಹ್ವಾಗ್: ₹ 25 ಲಕ್ಷ ಗೆದ್ದುಕೊಟ್ಟ ಪ್ರಶ್ನೆ ಇಲ್ಲಿದೆ

ಬಾಲಿವುಡ್ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ವಿಶೇಷ ಸಂಚಿಕೆಯಲ್ಲಿ ಭಾರತೀಯ ಕ್ರಿಕೆಟ್ ದಿಗ್ಗಜರಾದ ಸೌರ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು.

ಚಾರಿಟಿ ಗಾಗಿ ಈ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದ ಕ್ರಿಕೆಟ್ ದಿಗ್ಗಜರು ಅತ್ಯುತ್ತಮವಾಗಿ ಆಟ ಆಡಿದರು. ಕಾರ್ಯಕ್ರಮದಲ್ಲಿ ಸೆಹ್ವಾಗ್ ಮತ್ತು ಗಂಗೂಲಿ ಇಬ್ಬರೂ ಸೇರಿ 25ಲಕ್ಷ ರೂ ಮೊತ್ತವನ್ನು ಗೆದ್ದಿದ್ದಾರೆ. ಗೆದ್ದ ಸಂಪೂರ್ಣ ಹಣವನ್ನು ಸಮಾಜಸೇವೆಗಾಗಿ ಸಂಬಂಧಪಟ್ಟ ಟ್ರಸ್ಟ್ ಗಳಿಗೆ ಅವರು 50 ಲಕ್ಷದ ಪ್ರಶ್ನೆಗೆ ತಯಾರಾದಾಗ ಸಮಯ ಮುಗಿದು, ಆಟ ಅಂತ್ಯವಾಯಿತು. 

25 ಲಕ್ಷ ಗೆದ್ದ ಅವರ ಪ್ರಶ್ನೆ ಇದಾಗಿತ್ತು. ‘1942 ರಲ್ಲಿ ಪ್ರಾರಂಭವಾದ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಆಜಾದ್ ಹಿಂದ್ ರೇಡಿಯೋ, ಯಾವ ದೇಶದಲ್ಲಿ ಸೇವೆ ಆರಂಭಿಸಿತು?’. ವೀರು ಹಾಗೂ ದಾದಾ ಮುಂದೆ ಜಪಾನ್, ಜರ್ಮನಿ, ಸಿಂಗಾಪುರ್ ಮತ್ತು ಬರ್ಮಾ ಎಂಬ ನಾಲ್ಕು ಆಯ್ಕೆಗಳಿದ್ದವು. ಸರಿಯಾದ ಉತ್ತರ ಜರ್ಮನಿಯಾಗಿತ್ತು. ಅದನ್ನು ಉತ್ತರಿಸಿದ ಕಾರಣದಿಂದ ಕ್ರಿಕೆಟಿಗರು ಹಣವನ್ನು ತಮ್ಮದಾಗಿಸಿಕೊಂಡರು. ತಮಗೆ ಸಂಬಂದಪಟ್ಟ ಚಾರಿಟಿ ಟ್ರಸ್ಟ್​ಗಳಿಗೆ ಹಣವನ್ನು ನೀಡುವುದಾಗಿ ಈಗಾಗಲೇ ಕ್ರಿಕೆಟಿಗರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top