fbpx
ಸಮಾಚಾರ

ಚಿರು ಪುತ್ರನ ನಾಮಕರಣಕ್ಕೆ ಅರ್ಜುನ್ ಸರ್ಜಾ ಗೈರಾಗಿದ್ದು ಯಾಕೆ ಗೊತ್ತಾ? ಇಲ್ಲಿದೆ ಕಾರಣ

ಇಷ್ಟು ದಿನ ಜೂನಿಯರ್​ ಚಿರು ಆಗಿದ್ದ ಸರ್ಜಾ ಕುಟುಂಬದ ಕುಡಿಗೆ ಇಂದು ಅಧಿಕೃತ ಹೆಸರು ಸಿಕ್ಕಿದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್​ ಅವರ ಇಂದು ನಾಮಕರಣ ಮಾಡಲಾಗಿದ್ದು, ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ.

ರಾಯನ್ ರಾಜ್ ಸರ್ಜಾ ಹುಟ್ಟಿದಾಗಲೂ ಸಿನಿಮಾ ಚಿತ್ರೀಕರಣದಲ್ಲಿದ್ದ ಅರ್ಜುನ್ ಸರ್ಜಾ ಅವರು ಎಲ್ಲವನ್ನೂ ಬಿಟ್ಟು ಮಗು ನೋಡಲು ಬಂದಿದ್ದರು. ಆದರೆ ಈಗ ನಾಮಕರಣಕ್ಕೆ ಗೈರಾಗಿದ್ದಾರೆ. ಕಾರಣ,  ಅರ್ಜುನ್ ಸರ್ಜಾ ಅವರು ಕುಟುಂಬ ಸಮೇತ ದಕ್ಷಿಣ ಆಫ್ರಿಕಾದಲ್ಲಿ ಇದ್ದಾರಂತೆ. ಶೂಟಿಂಗ್ ನಿಮಿತ್ತ ಅರ್ಜುನ್ ಸರ್ಜಾ ಕುಟುಂಬ ಆಫ್ರಿಕಾದಲ್ಲಿ ಬೀಡು ಬಿಟ್ಟಿದೆ.

“ದಕ್ಷಿಣ ಆಫ್ರಿಕಾದಲ್ಲಿ ಇರುವುದರಿಂದ ಅರ್ಜುನ್ ಸರ್ಜಾ ಕುಟುಂಬಕ್ಕೆ ಬರಲು ಸಾಧ್ಯವಾಗಿಲ್ಲ” ಎಂದು ಸುಂದರ್ ರಾಜ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top